ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಗಡಿಯುದ್ದಕ್ಕೂ ಹೊಸ ಸವಾಲು: ನರವಣೆ

Last Updated 6 ಏಪ್ರಿಲ್ 2021, 13:00 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತ ಗಡಿಯುದ್ದಕ್ಕೂ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಸದ್ಯ ತರಬೇತಿ ಪಡೆಯುತ್ತಿರುವ ಅಧಿಕಾರಿಗಳು ಈ ಎಲ್ಲ ಬೆಳವಣಿಗೆಗಳ ಬಗ್ಗೆ ಅರಿವು ಹೊಂದಿರಬೇಕು’ ಎಂದು ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಹೇಳಿದರು.

‘ಪಶ್ಚಿಮ ಮತ್ತು ಉತ್ತರದ ಗಡಿ ಭಾಗದಲ್ಲಿನ ಬೆಳವಣಿಗೆಗಳು ಮತ್ತು ಭಾರತೀಯ ಸೇನೆಯ ಭವಿಷ್ಯದ ಕಾರ್ಯಸೂಚಿ’ ವಿಷಯ ಕುರಿತು ಅವರು ತಮಿಳುನಾಡಿನ ವೆಲ್ಲಿಂಗ್‌ಟನ್‌ನ ಡಿಫೆನ್ಸ್‌ ಸರ್ವೀಸ್‌ ಸ್ಟಾಫ್‌ ಕಾಲೇಜಿನಲ್ಲಿ (ಡಿಎಸ್ಎಸ್‌ಸಿ) ಮಾತನಾಡಿದರು.

ಸೇನಾ ಮುಖ್ಯಸ್ಥರಾದ ನರವಣೆ ಅವರು ಕಾಲೇಜಿಗೆ ಎರಡು ದಿನದ ಭೇಟಿ ನೀಡಿದ್ದು, ಸಿಬ್ಬಂದಿ ತರಬೇತಿಯ 76ನೇ ಕಾರ್ಯಕ್ರಮದಲ್ಲಿ ಮಾತನಾಡಿದರು.ಡಿಎಸ್ಎಸ್‌ಸಿ ಕಮಾಂಡೆಂಟ್‌ ಲೆಫ್ಟಿನಂಟ್‌ ಜನರಲ್ ಎಂ.ಜೆ.ಎಸ್‌.ಕಹ್ಲೋನ್ ಅವರು ಸದ್ಯ ನಡೆಯುತ್ತಿರುವ ತರಬೇತಿ ಕಾರ್ಯಕ್ರಮ ಕುರಿತು ವಿವರ ನೀಡಿದರು ಎಂದು ಸೇನಾ ಹೇಳಿಕೆ ತಿಳಿಸಿದೆ.

ಕೋವಿಡ್‌ ಸ್ಥಿತಿ ನಡುವೆಯೂ ತರಬೇತಿಯಲ್ಲಿ ಉನ್ನತ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ ಎಂದು ನರವಣೆ ಶ್ಲಾಘಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT