ಭಾನುವಾರ, ಮೇ 22, 2022
25 °C
ಭಾರತ ಪಡೆದ ಮೊದಲ ರಫ್ತು ಆದೇಶ

ಬ್ರಹ್ಮೋಸ್‌ ಕ್ಷಿಪಣಿಗಳ ಪೂರೈಕೆಗೆ ಫಿಲಿಪ್ಪೀನ್ಸ್ ಒಪ್ಪಂದ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅತ್ಯಾಧುನಿಕ ‘ಬ್ರಹ್ಮೋಸ್‌’  ಕ್ಷಿಪಣಿಗಳ ಪೂರೈಕೆಗೆ ಫಿಲಿಪ್ಪೀನ್ಸ್‌ನ ರಕ್ಷಣಾ ಸಚಿವಾಲಯ ಭಾರತದೊಂದಿಗೆ ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಕ್ಷಿಪಣಿಗಳ ರಫ್ತಿಗೆ ಸಂಬಂಧಿಸಿ ಭಾರತ ಪಡೆದ ಮೊದಲ ಆದೇಶ ಇದಾಗಿದೆ. ₹ 2,808 ಕೋಟಿ ವೆಚ್ಚದಲ್ಲಿ ಕ್ಷಿಪಣಿಗಳ ಪೂರೈಕೆಗೆ ಸಂಬಂಧಿಸಿ, ಫಿಲಿಪ್ಪೀನ್ಸ್‌ ರಕ್ಷಣಾ ಸಚಿವಾಲಯವು ಬ್ರಹ್ಮೋಸ್‌ ಏರೋಸ್ಪೇಸ್‌ ಪೈವೇಟ್‌ ಲಿಮಿಟೆಡ್‌ (ಬಿಎಪಿಎಲ್‌) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ.

ಯುದ್ಧನೌಕೆ ನಿರೋಧಕ ಬ್ರಹ್ಮೋಸ್‌ ಕ್ಷಿಪಣಿ ವ್ಯವಸ್ಥೆಯನ್ನು ಫಿಲಿಪ್ಪೀನ್ಸ್‌ ನೌಕಾಪಡೆಗೆ ಪೂರೈಕೆ ಮಾಡಲಾಗುವುದು ಎಂದಿರುವ ಅಧಿಕಾರಿಗಳು, ಪೂರೈಕೆ ಮಾಡಲಾಗುವ ಕ್ಷಿಪಣಿಗಳ ಸಂಖ್ಯೆ ಬಗ್ಗೆ ಮಾಹಿತಿ ನೀಡಿಲ್ಲ.

ಬಿಎಪಿಎಲ್‌, ಭಾರತ ಹಾಗೂ ರಷ್ಯಾದ ಜಂಟಿ ಉದ್ಯಮವಾಗಿದ್ದು, ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿ ‘ಬ್ರಹ್ಮೋಸ್‌’ ತಯಾರಿಸುತ್ತದೆ. ಈ ಕ್ಷಿಪಣಿಗಳನ್ನು ಜಲಾಂತರ್ಗಾಮಿಗಳು, ಯುದ್ಧನೌಕೆಗಳು, ಯುದ್ಧವಿಮಾನಗಳು ಹಾಗೂ ಭೂಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವ ಸೇನೆಯ ನಿರ್ದಿಷ್ಟ ವಾಹನಗಳ ಮೂಲಕ ಉಡಾಯಿಸಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು