ಭಾನುವಾರ, ನವೆಂಬರ್ 29, 2020
19 °C

ಭಾರತದಲ್ಲಿನ ಚೇತರಿಕೆಯ ಪ್ರಮಾಣ ವಿಶ್ವದಲ್ಲಿಯೇ ಅತಿಹೆಚ್ಚು: ರಾಜೇಶ್ ಭೂಷಣ್

ಎಎನ್‌ಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುವ ಪ್ರಮಾಣವು ವಿಶ್ವದಲ್ಲೇ ಅತಿಹೆಚ್ಚು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಂಗಳವಾರ ತಿಳಿಸಿದ್ದಾರೆ.

ದೇಶದ ಕೋವಿಡ್-19 ಪರಿಸ್ಥಿತಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಾವು ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್-19ನಿಂದ ಚೇತರಿಸಿಕೊಂಡ ಪ್ರಕರಣಗಳನ್ನು ಹೊಂದಿದ್ದೇವೆ ಮತ್ತು ವಿಶ್ವದ ಇತರೆ ದೇಶಗಳಲ್ಲಿ ಹೆಚ್ಚಿನ ಪರೀಕ್ಷೆಗಳನ್ನು ನಡೆಸಿದವರ ಪೈಕಿ ನಾವು ಎರಡನೇ ಸ್ಥಾನದಲ್ಲಿದ್ದೇವೆ. ಭಾರತದಲ್ಲಿ ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 67 ಲಕ್ಷ ದಾಟಿದೆ. ನಾವು ದೇಶದಲ್ಲಿ 9.6 ಕೋಟಿಗೂ ಹೆಚ್ಚು ಪರೀಕ್ಷೆಗಳನ್ನು ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಅನೇಕ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣವಾಗುತ್ತಿರುವುದನ್ನು ವರದಿ ಮಾಡಿದ್ದರೆ, ಕಳೆದ 7 ದಿನಗಳಲ್ಲಿ ಭಾರತದಲ್ಲಿ ಪ್ರತಿ ಮಿಲಿಯನ್‌ಗೆ 310 ಪ್ರಕರಣಗಳು ವರದಿಯಾಗಿವೆ. ಇದು ಜಾಗತಿಕವಾಗಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಇದೇ ಅವಧಿಯಲ್ಲಿ ಪ್ರತಿ ಮಿಲಿಯನ್‌ಗೆ ಭಾರತದಲ್ಲಿ 83 ಜನರು ಸಾವಿಗೀಡಾಗುತ್ತಿದ್ದು, ಜಾಗತಿಕವಾಗಿ ಇದು ಕೂಡ ಕಡಿಮೆ ಪ್ರಮಾಣದಲ್ಲಿದೆ ಎಂದು ಭೂಷಣ್ ಹೇಳಿದ್ದಾರೆ.

ಸದ್ಯ ಚೇತರಿಕೆ ಪ್ರಮಾಣವು ಶೇ 88.63 ರಷ್ಟಿದೆ ಮತ್ತು ಅದು ಇನ್ನಷ್ಟು ಸುಧಾರಿಸಿಕೊಳ್ಳುತ್ತಿದೆ. ಸಕ್ರಿಯ ಪ್ರಕರಣಗಳು ಈಗ 7.5 ಲಕ್ಷಕ್ಕಿಂತ ಕಡಿಮೆಯಾಗಿವೆ ಮತ್ತು ಇಳಿಮುಖವಾಗುತ್ತಿವೆ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ 64 ರಷ್ಟಿದೆ ಎಂದಿದ್ದಾರೆ.

84 ದಿನಗಳ ನಂತರ ಭಾರತದಲ್ಲಿ ಒಂದು ದಿನದಲ್ಲಿ 50,000 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಸದ್ಯ ಶೇ 1.52 ರಷ್ಟಿರುವ ಸಾವಿನ ಪ್ರಮಾಣ ಈಗ ಕುಸಿಯುತ್ತಿದೆ. ಮರಣ ಪ್ರಮಾಣವನ್ನು ಶೇ 1 ಕ್ಕಿಂತ ಕಡಿಮೆ ತರಲು ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದಿದ್ದಾರೆ.

ಕಳೆದ 24 ಗಂಟೆಗಳಲ್ಲಿ 46,791 ಪ್ರಕರಣಗಳು ವರದಿಯಾಗಿದ್ದು, 587 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 75,97,064ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

7,48,538 ಸಕ್ರಿಯ ಪ್ರಕರಣಗಳಿದ್ದು, 67,33,329 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟಾರೆ 1,15,197 ಜನರು ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು