ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತವು ಆರ್ಥಿಕ ಬಿಕ್ಕಟ್ಟಿನತ್ತ ಸಾಗುತ್ತಿದೆ: ಅಮಿತ್ ಮಿತ್ರಾ

Last Updated 20 ಡಿಸೆಂಬರ್ 2021, 16:47 IST
ಅಕ್ಷರ ಗಾತ್ರ

ಕೋಲ್ಕತ್ತ:ಹಣದುಬ್ಬರದ ಏರಿಕೆಗೆ ಅನುಗುಣವಾಗಿ ಉದ್ಯೋಗ ಪ್ರಮಾಣ ಮತ್ತು ಆರ್ಥಿಕ ಬೇಡಿಕೆ ಹೆಚ್ಚದಿರುವ ಬಿಕ್ಕಟ್ಟಿನ ಸ್ಥಿತಿಯತ್ತ ಭಾರತ ಸಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮುಖ್ಯ ಸಲಹೆಗಾರ ಅಮಿತ್‌ ಮಿತ್ರಾ ಕಳವಳ ವ್ಯಕ್ತಪಡಿಸಿದ್ದಾರೆ.

ದೇಶವು ಈಗಾಗಲೇ ಅತಿಯಾದ ಹಣದುಬ್ಬರ ಮತ್ತು ನಿರುದ್ಯೋಗದ ಏರಿಕೆಯಿಂದ ಬಳಲುತ್ತಿದೆ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.

ಮುಖ್ಯ ಆರ್ಥಿಕ ಅಧಿಕಾರಿಗಳ (ಸಿಎಫ್‌ಒ) ನಾಯಕತ್ವ ಸಮಾವೇಶದಲ್ಲಿ ಮಾತನಾಡಿದ ಮಿತ್ರಾ,ದೇಶದ ಒಟ್ಟಾರೆ ಹಣದುಬ್ಬರ ಪ್ರಮಾಣ ಶೇ 14.2 ರಷ್ಟಿದೆ. ನಿರುದ್ಯೋಗ ಪ್ರಮಾಣ ಶೇ 10.48 ರಷ್ಟು ಹೆಚ್ಚಾಗಿದೆ. ಇದೀಗ ಖಾಸಗಿ ವಲಯದ ಹೂಡಿಕೆ (ಹೆಚ್ಚಳವಿಲ್ಲದೆ) ಇಲ್ಲದೆ, ನಿಶ್ಚಲತೆಯತ್ತ ಸಾಗುತ್ತಿದ್ದೇವೆ ಎಂದು ಹೇಳಿದ್ದಾರೆ.ಇನ್ಸ್‌ಟಿಟ್ಯೂಟ್‌ ಆಫ್‌ ಕಾಸ್ಟ್‌ ಅಕೌಂಟಂಟ್ಸ್‌ ಆಫ್‌ ಇಂಡಿಯಾ ಈ ಸಮಾವೇಶವನ್ನು ವರ್ಚುವಲ್‌ ಆಗಿ ಆಯೋಜಿಸಿತ್ತು.

'2016ರಲ್ಲಿ ನೋಟು ರದ್ದು ಮಾಡಿದ್ದು ಮತ್ತು ಜಿಎಸ್‌ಟಿ ಜಾರಿ ಗೊಳಿಸುವುದರೊಂದಿಗೆ ಆರಂಭವಾದಕೇಂದ್ರ ಸರ್ಕಾರದ ದೋಷಪೂರಿತ ಆರ್ಥಿಕ ನೀತಿಗಳಿಂದಾಗಿಭಾರತವು ಇಂತಹ ಸಂದಿಗ್ಧ ಸನ್ನಿವೇಶವನ್ನು ಎದುರಿಸುತ್ತಿದೆ. ಅಷ್ಟೇ ಅಲ್ಲದೇ, ಕೋವಿಡ್‌ ಸಂದರ್ಭದಲ್ಲಿ ಆರ್ಥಿಕತೆಯನ್ನು ಮುನ್ನಡೆಸಲು ಜಾರಿಗೊಳಿಸಿದ ತಪ್ಪಾದ ನೀತಿಗಳು, ಖಾಸಗಿ ಹೂಡಿಕೆ ಅಥವಾ ಜನರು ಸ್ವ–ಉದ್ಯೋಗದತ್ತ ತೊಡಗಿಕೊಳ್ಳಲು ಉತ್ತೇಜನ ನೀಡಲು ವಿಫವಾಗಿವೆ' ಎಂದು ದೂರಿದ್ದಾರೆ.

ಇದೇ ವೇಳೆ ಅವರು ಪಶ್ಚಿಮ ಬಂಗಾಳದಲ್ಲಿ ಸರಿಯಾದ ನೀತಿಯನ್ನು ಅಳವಡಿಸಿಕೊಂಡಿರುವುದರ ಪರಿಣಾಮ ರಾಜ್ಯದ ಜಿಡಿಪಿ ಬೆಳವಣಿಗೆ ಧನಾತ್ಮಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದುವರಿದು,ಹೂಡಿಕೆಯ ಮೂಲಕಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಸಲುವಾಗಿಹಲವು ದೇಶಗಳು ಜನರಿಗೆ ನೇರವಾಗಿ ಹಣನೀಡಿವೆ. ಆದರೆ, ಭಾರತದಲ್ಲಿ ಮಾತ್ರ ಅಂತಹ ಕೆಲಸ ಆಗಲಿಲ್ಲ ಎಂದು ಆರೋಪಿಸಿದ್ದಾರೆ.

'ಜಾಗತಿಕ ಅಸಮಾನತೆ ವರದಿ–2022ರ ಪ್ರಕಾರಭಾರತವು ಅತ್ಯಂತ ಅಸಮಾನತೆ ಹೊಂದಿರುವ ದೇಶವೆನಿಸಿದೆ. ಆರ್ಥಿಕವಾಗಿ ಪ್ರಬಲವಾಗಿರುವ ಅಗ್ರ ಶೇ 1 ರಷ್ಟು ಜನರು ದೇಶದ ಆದಾಯದ ಶೇ 22 ರಷ್ಟರ ಮೇಲೆ ಹಿಡಿತ ಹೊಂದಿದ್ದಾರೆ. ಇದೇವೇಳೆ ಕೊನೇ ಸ್ಥಾನದಲ್ಲಿರುವ ಶೇ 50 ರಷ್ಟು ಜನರು, ದೇಶದ ಆದಾಯದ ಕೇವಲ ಶೇ 13ರಷ್ಟು ಪಾಲನ್ನು ಮಾತ್ರವೇ ಹೊಂದಿದ್ದಾರೆ' ಎಂದೂ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT