ಓಮೈಕ್ರಾನ್: ದೇಶದಲ್ಲಿ ಪ್ರಕರಣಗಳ ಸಂಖ್ಯೆ 151ಕ್ಕೆ ಏರಿಕೆ

ನವದೆಹಲಿ: ಭಾರತದಲ್ಲಿ ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ ಭಾನುವಾರ 151ಕ್ಕೆ ಏರಿದೆ.
ಬ್ರಿಟನ್ನಿಂದ ಇತ್ತೀಚೆಗೆ ಬಂದ ಅನಿವಾಸಿ ಭಾರತೀಯ ಮತ್ತು ಹದಿಹರೆಯದ ಒಬ್ಬ ಬಾಲಕನಲ್ಲಿ ಸೋಂಕು ದೃಢಪಟ್ಟಿದೆ.
ಈಗ, 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಓಮೈಕ್ರಾನ್ ಪ್ರಕರಣಗಳು ಇವೆ.
ಮಹಾರಾಷ್ಟ್ರ (54), ದೆಹಲಿ (22), ರಾಜಸ್ಥಾನ (17), ಕರ್ನಾಟಕ (14), ತೆಲಂಗಾಣ (20), ಗುಜರಾತ್ (9), ಕೇರಳ (11) ಮತ್ತು ಆಂಧ್ರ ಪ್ರದೇಶ, ಚಂಡೀಗಡ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ತಲಾ ಒಂದೊಂದು ಪ್ರಕರಣಗಳು ದೃಢಪಟ್ಟಿವೆ. ಓಮೈಕ್ರಾನ್ನ ಮೊದಲ ಪ್ರಕರಣವು ಕರ್ನಾಟಕದಲ್ಲಿ ಇದೇ 2ರಂದು ದೃಢಪಟ್ಟಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.