ಶನಿವಾರ, ಅಕ್ಟೋಬರ್ 23, 2021
20 °C

Covid India Update| ಇಂದು 14,313 ಪ್ರಕರಣ: ಕೇರಳದಲ್ಲೇ 6,996 ಜನರಿಗೆ ಸೋಂಕು

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ದೆಹಲಿ: ಭಾರತದಲ್ಲಿ ಇಂದು 14,313 ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 181 ಮಂದಿ ಮೃತಪಟ್ಟಿದ್ದಾರೆ. 

ಈ ಪೈಕಿ ಕೇರಳವೊಂದರಲ್ಲೇ 6,996 ಪ್ರಕರಣಗಳು ವರದಿಯಾಗಿವೆ. ಈ 24 ಗಂಟೆಗಳಲ್ಲಿ ಅಲ್ಲಿ  84 ಮಂದಿ ಸಾವಿಗೀಡಾಗಿದ್ದಾರೆ. 

ಇನ್ನು ಭಾರತದ ಒಟ್ಟಾರೆ ಸೋಂಕು ಪ್ರಕರಣ ಅ.12ರ ಹೊತ್ತಿಗೆ 3,39,85,920ಗೆ ತಲುಪಿದ್ದು, ಸದ್ಯ 2,14,900 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 

ಈ ವರೆಗೆ 3,33,20,057 ಗುಣಮುಖರಾಗಿದ್ದು, ಸಾವಿನ ಸಂಖ್ಯೆ 4,50,963 ಕ್ಕೆ ತಲುಪಿದೆ. 

ದೇಶದಲ್ಲಿ ಈ ವರೆಗೆ 95,89,78,049 ಮಂದಿಗೆ ಲಸಿಕೆ ಹಾಕಲಾಗಿದೆ. 24 ಗಂಟೆಗಳ ಅವಧಿಯಲ್ಲಿ 65,86,092 ಮಂದಿಗೆ ಲಸಿಕೆ ಹಾಕಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು