ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ವಿಶ್ವದಲ್ಲೇ 3ನೇ ಅತಿ ಕಲುಷಿತ ದೇಶ: ವರದಿ

Last Updated 17 ಮಾರ್ಚ್ 2021, 8:57 IST
ಅಕ್ಷರ ಗಾತ್ರ

ಬೆಂಗಳೂರು: ಭಾರತವು ಜಗತ್ತಿನಲ್ಲೇ ಮೂರನೇ ಅತ್ಯಂತ ಕಲುಷಿತ ರಾಷ್ಟ್ರ ಎಂಬ ಅಪಖ್ಯಾತಿಗೊಳಗಾಗಿದೆ. ಐಕ್ಯೂಏರ್ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶ ದಾಖಲಾಗಿದೆ.

98 ರಾಷ್ಟ್ರಗಳ ಗ್ರೌಂಡ್-ಲೆವೆಲ್ ಮಾನಿಟರಿಂಗ್ ಸ್ಟೇಷನ್‌ಗಳ ಮಾಹಿತಿಯ ಆಧಾರದಲ್ಲಿ ಕಲುಷಿತ ದೇಶ ಹಾಗೂ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎಂಬ ಅಪಖ್ಯಾತಿಗೊಳಗಾಗಿದೆ.

ಗ್ರೀನ್‌ಪೀಸ್, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಹಾಗೂ ಇತರ ಏಜೆನ್ಸಿಗಳ ಬೆಂಬಲದೊಂದಿಗೆ ವಾರ್ಷಿಕ ವಿಶ್ವದ ವಾಯು ಗುಣಮಟ್ಟ ವರದಿ ಬಿಡುಗಡೆ ಮಾಡಿದೆ.

ಭಾರತದಲ್ಲಿ ಇದರ ಪ್ರಮಾಣ 51 ಮೈಕ್ರೋಗ್ರಾಂ ಆಗಿದ್ದು, ಮೊದಲೆರಡು ಸ್ಥಾನಗಳಲ್ಲಿರುವ ಬಾಂಗ್ಲಾದೇಶ (77.1) ಹಾಗೂ ಪಾಕಿಸ್ತಾನದಲ್ಲಿ (59) ರಷ್ಟಿದೆ.

2019ಕ್ಕೆ (58.1) ಹೋಲಿಸಿದರೆ ಭಾರತದಲ್ಲೂ ಮಾಲಿನ್ಯ ಮಟ್ಟ ಕಡಿಮೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಅಂತೆಯೇ, ಜಗತ್ತಿನಾದ್ಯಂತ ಹೆಚ್ಚು ಕಲುಷಿತವಾದ ರಾಜಧಾನಿಗಳ ಪೈಕಿ, ನವದೆಹಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಹಾಗಿದ್ದರೂ 2019ಕ್ಕೆ ಹೋಲಿಸಿದಾಗ (98.6) ಮೈಕ್ರೋಗ್ರಾಂ ಪ್ರಮಾಣವು 84.1ಕ್ಕೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT