ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ, ಪಾಕಿಸ್ತಾನವನ್ನು ಎದುರಿಸಲು ಪ್ರಿಡೇಟರ್ ಡ್ರೋನ್‌ ಖರೀದಿಸಲಿರುವ ಭಾರತ

Last Updated 10 ಮಾರ್ಚ್ 2021, 4:02 IST
ಅಕ್ಷರ ಗಾತ್ರ

ನವದೆಹಲಿ: ನೆರೆಯ ಚೀನಾ ಮತ್ತು ಪಾಕಿಸ್ತಾನದಲ್ಲಿ ಉದ್ವಿಗ್ನತೆ ಮುಂದುವರಿದಿರುವುದರಿಂದ ಭಾರತ ತನ್ನ ಸಮುದ್ರ ಮತ್ತು ಭೂ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು 30 ಸಶಸ್ತ್ರ ಡ್ರೋನ್‌ಗಳನ್ನು ಅಮೆರಿಕದಿಂದ ಖರೀದಿಸಲು ಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಯಾನ್ ಡಿಯಾಗೋ ಮೂಲದ ಜನರಲ್ ಅಟಾಮಿಕ್ಸ್ ತಯಾರಿಸಿದ 30 ಎಂಕ್ಯೂ -9 ಬಿ ಪ್ರಿಡೇಟರ್ ಡ್ರೋನ್‌ಗಳನ್ನು 300 ಕೋಟಿ ಡಾಲರ್ ಕೊಟ್ಟು ಖರೀದಿಸಲು ದಕ್ಷಿಣ ಏಷ್ಯಾ ರಾಷ್ಟ್ರವು ಮುಂದಿನ ತಿಂಗಳು ಅನುಮೋದನೆ ನೀಡಲಿದೆ ಎಂದು ಹೆಸರನ್ನು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ. ಈ ಒಪ್ಪಂದವು ಭಾರತದ ಮಿಲಿಟರಿ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಏಕೆಂದರೆ, ಸದ್ಯ ಭಾರತ ಹೊಂದಿರುವ ಡ್ರೋನ್‌ಗಳನ್ನು ಕಣ್ಗಾವಲು ಮತ್ತು ವಿಚಕ್ಷಣ ಕಾರ್ಯಗಳಿಗಾಗಿ ಮಾತ್ರ ಬಳಸಬಹುದಾಗಿದೆ.

ಭಾರತವು ಅಮೆರಿಕದ ಕಾರ್ಯತಂತ್ರದ ರಕ್ಷಣಾ ಪಾಲುದಾರನಾಗಿ ಹೊರಹೊಮ್ಮುತ್ತಿದೆ, ವಿಶೇಷವಾಗಿ ಹಿಂದೂ ಮಹಾಸಾಗರ ಮತ್ತು ಆಗ್ನೇಯ ಏಷ್ಯಾದ ಕೆಲವು ಪ್ರದೇಶಗಳಲ್ಲಿ ಚೀನಾದ ಪ್ರಭಾವವನ್ನು ಎದುರಿಸಲು ಪ್ರಧಾನಿ ಕೇಂದ್ರ ಸರ್ಕಾರವು 10 ವರ್ಷಗಳಲ್ಲಿ 25,000 ಕೋಟಿ ಡಾಲರ್ ಮೊತ್ತದಲ್ಲಿ ಮಿಲಿಟರಿ ಆಧುನೀಕರಣದ ಯೋಜನೆಯಲ್ಲಿದೆ.

ಆದರೆ, ಈ ಬಗ್ಗೆ ಭಾರತದ ರಕ್ಷಣಾ ಸಚಿವಾಲಯ ಮತ್ತು ಜನರಲ್ ಅಟಾಮಿಕ್ಸ್‌ನ ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಇತ್ತ, ಪೆಂಟಗನ್ ಅಧಿಕಾರಿಗಳು ಸಹ ಪ್ರತಿಕ್ರಿಯಿಸಿಲ್ಲ.

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಈ ತಿಂಗಳು ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಅಧ್ಯಕ್ಷ ಜೋ ಬೈಡನ್ ಶೀಘ್ರದಲ್ಲೇ ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾದ ಸಹವರ್ತಿಗಳೊಂದಿಗೆ "ಕ್ವಾಡ್" ಬಣದ ಮೊದಲ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾರ್ಚ್ 12 ರಂದು ನಾಯಕರು ವರ್ಚುವಲ್ ಸಭೆಯಲ್ಲಿ ಭೇಟಿಯಾಗಲಿದ್ದಾರೆ ಎಂದು ಭಾರತ ಸರ್ಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸಭೆಯಲ್ಲಿ ಸರಬರಾಜು ಸರಪಳಿಗಳು, ಕಡಲ ಸುರಕ್ಷತೆ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸುವುದಾಗಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT