ಶನಿವಾರ, ಏಪ್ರಿಲ್ 1, 2023
23 °C

ಎಲ್ಲಾ ದೇಶಗಳಿಗೂ ‘ಕೋವಿನ್‌’ ಆ್ಯಪ್‌ ಲಭ್ಯ: ಪ್ರಧಾನಿ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ಕೋವಿಡ್ ಲಸಿಕಾ ಅಭಿಯಾನದ ತಂತ್ರಜ್ಞಾನ ವೇದಿಕೆ ‘ಕೋವಿನ್‌’ ಆ್ಯಪ್‌ ಅನ್ನು ಜಾಗತಿಕ ಮಟ್ಟದ ಬಳಕೆಗೆ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕೋವಿನ್‌ ಗ್ಲೋಬಲ್‌ ಕಾನ್‌ಕ್ಲೇವ್‌ನಲ್ಲಿ ತಿಳಿಸಿದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ‘ಕೋವಿಡ್‌ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಭಾರತ ತನ್ನ ಪರಿಣತಿ, ಅನುಭವ ಮತ್ತು ಸಂಪನ್ಮೂಲಗಳನ್ನು ಜಾಗತಿಕ ಸಮುದಾಯದ ಜೊತೆ ಹಂಚಿಕೊಳ್ಳಲು ಬದ್ಧವಾಗಿದೆ. ನಮ್ಮ ಮಿತಿಗಳ ನಡುವೆಯೂ ನಾವು ಮೊದಲಿನಿಂದಲೂ ಜಗತ್ತಿನ ಜೊತೆ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟನ್ನು ಹಂಚಿಕೊಂಡಿದ್ದೇವೆ’ ಎಂದರು.

ಎಷ್ಟೇ ಪ್ರಬಲ ದೇಶವಾದರೂ ಈ ರೀತಿಯ ಸಾಂಕ್ರಾಮಿಕವನ್ನು ಏಕಾಂಗಿಯಾಗಿ ಎದುರಿಸಲಾಗದು ಎಂಬುದನ್ನು ಅನುಭವ ತೋರಿಸಿಕೊಟ್ಟಿದೆ. ಕೋವಿಡ್‌ ವಿರುದ್ಧದ ಭಾರತದ ಹೋರಾಟಕ್ಕೆ ತಂತ್ರಜ್ಞಾನವನ್ನು ಪೂರ್ಣವಾಗಿ ಮೀಸಲಿಡಬೇಕಿಲ್ಲ. ಖುಷಿಯ ವಿಚಾರವೇನೆಂದರೆ ಸಾಫ್ಟ್‌ವೇರ್‌ ಬಳಕೆಗೆ ಸಂಪನ್ಮೂಲದ ಮಿತಿ ಎಂಬುದು ಇರುವುದಿಲ್ಲ ಎಂದು ಅವರು ಹೇಳಿದರು.

ಕೆನಡ, ಮೆಕ್ಸಿಕೊ, ನೈಜೀರಿಯಾ, ಪನಾಮ, ಉಗಾಂಡ ಸೇರಿ 50ಕ್ಕೂ ಹೆಚ್ಚು ದೇಶಗಳು ಲಸಿಕಾ ಅಭಿಯಾನಕ್ಕಾಗಿ ‘ಕೋವಿನ್‌’ ಅಳವಡಿಸಿಕೊಳ್ಳಲು ಆಸಕ್ತಿ ತೋರಿವೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಡಾ. ಆರ್‌.ಎಸ್‌. ಶರ್ಮ ಇತ್ತೀಚೆಗೆ ಹೇಳಿದ್ದರು.

*
ಇಡೀ ಜಗತ್ತನ್ನೇ ಒಂದು ಕುಟುಂಬ ಎಂದು ಭಾವಿಸುವುದನ್ನು ನಮ್ಮ ನಾಗರಿಕತೆ ಪ್ರತಿಪಾದಿಸುತ್ತದೆ.ಹಾಗಾಗಿ, ಕೋವಿನ್‌ ಅನ್ನು ಎಲ್ಲರಿಗೂ ಅನುಕೂಲ ಆಗುವಂತೆ ರೂಪಿಸುತ್ತಿರುವುದು.
-ನರೇಂದ್ರ ಮೋದಿ, ಪ್ರಧಾನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು