ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ– ಅಮೆರಿಕ ಜಂಟಿ ಸಮರಾಭ್ಯಾಸ ಆರಂಭ

Last Updated 8 ಫೆಬ್ರುವರಿ 2021, 13:12 IST
ಅಕ್ಷರ ಗಾತ್ರ

ಬಿಕಾನೇರ್‌: ಭಾರತ– ಅಮೆರಿಕ ಸೇನೆಗಳ ನಡುವಣ 16ನೇ ಆವೃತ್ತಿಯ ಸೇನಾ ಜಂಟಿ ಸಮರಾಭ್ಯಾಸ ‘ಯುದ್ಧ್‌ ಅಭ್ಯಾಸ್‌’ ರಾಜಸ್ಥಾನದ ಪಶ್ಚಿಮ ವಲಯದಲ್ಲಿರುವ ಮಹಾನ್ ಫೀಲ್ಡ್‌ ಫೈರಿಂಗ್‌ ರೇಂಜಸ್‌ನಲ್ಲಿ ಸೋಮವಾರ ಪ್ರಾರಂಭವಾಗಿದೆ.

ಭಾರತೀಯ ಸೇನೆಯ ಬ್ರಿಗೇಡಿಯರ್ ಮುಖೇಶ್ ಭನ್ವಾಲಾ ಅವರು ಅಮೆರಿಕದ ತುಕಡಿಯನ್ನು ಸ್ವಾಗತಿಸಿದರು.

‘ಈ ಸಮರಾಭ್ಯಾಸ ಎರಡೂ ರಾಷ್ಟ್ರಗಳ ಸೇನೆಗಳ ನಡುವೆ ರಕ್ಷಣಾ ಸಹಕಾರ ಹೆಚ್ಚಿಸಲಿದೆ. ಉಭಯ ದೇಶಗಳ ನಡುವಿನ ಯುದ್ಧತಾಂತ್ರಿಕ ಸಹಭಾಗಿತ್ವ ವೃದ್ಧಿಗೆ ಇದು ಸಹಕಾರಿಯಾಗಲಿದೆ.ಯುದ್ಧದ ಹೊಸ ತಂತ್ರಗಳನ್ನು ಅರಿಯಲು ನೆರವಾಗುತ್ತದೆ ಎಂಬುದನ್ನುಬ್ರಿಗೇಡಿಯರ್ ಮುಖೇಶ್ ಭನ್ವಾಲಾ ಒತ್ತಿ ಹೇಳಿದ್ದಾರೆ’ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅಮಿತಾಭ್ ಶರ್ಮಾ ಹೇಳಿದ್ದಾರೆ.

ಫೆಬ್ರುವರಿ 21ರವರೆಗೆ ‘ಯುದ್ಧ್‌ ಅಭ್ಯಾಸ್‌’ ನಡೆಯಲಿದೆ. ರಾಜಸ್ಥಾನದಲ್ಲಿ ಭಾರತ ಮತ್ತು ಫ್ರಾನ್ಸ್‌ನ ವಾಯುಪಡೆಗಳು ಜನವರಿಯಲ್ಲಿ ಐದು ದಿನಗಳ ಜಂಟಿ ಸಮರಾಭ್ಯಾಸ ನಡೆಸಿದ್ದವು. ಇದರ ಬೆನ್ನಲ್ಲೇ ಈ ‘ಯುದ್ಧ್‌ ಅಭ್ಯಾಸ್‌’ ಕೂಡ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT