ಗುರುವಾರ , ನವೆಂಬರ್ 26, 2020
21 °C

ದತ್ತಾಂಶ ಒಪ್ಪಂದಕ್ಕೆ ಸಹಿ ಹಾಕಲಿರುವ ಭಾರತ–ಅಮೆರಿಕ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಮತ್ತು ಅಮೆರಿಕದ ವಿದೇಶಾಂಗ ಹಾಗೂ ರಕ್ಷಣಾ ಸಚಿವರ ಮಟ್ಟದ ಸಭೆ ಮಂಗಳವಾರ ನಿಗದಿಯಾಗಿದ್ದು ಇದಕ್ಕೂ ಮುನ್ನ ಉಭಯ ರಾಷ್ಟ್ರಗಳು ದತ್ತಾಂಶ ಒಪ್ಪಂದಕ್ಕೆ ಸಹಿ ಹಾಕಲಿವೆ. 

ದ್ವಿ‍ಪಕ್ಷೀಯ ಸಂಬಂಧಗಳು ಮತ್ತು ಭದ್ರತಾ ಸಹಕಾರವನ್ನು ಬಲಪಡಿಸುವ ಹಾಗೂ ಪೂರ್ವ ಲಡಾಖ್‌ನಲ್ಲಿ ಗಡಿ ಕ್ಯಾತೆ ತೆಗೆದಿರುವ ನೆರೆಯ ಚೀನಾಕ್ಕೆ ಬಿಸಿ ಮುಟ್ಟಿಸುವ ಬಗ್ಗೆ ಮಂಗಳವಾರ ನಿಗದಿಯಾಗಿರುವ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂ‍ಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್‌ ಎಸ್ಪರ್‌ ಅವರು, ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಾಗೂ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರ ಜೊತೆ ಚರ್ಚಿಸಲಿದ್ದಾರೆ.

‘ರಾಜನಾಥ್‌ ಸಿಂಗ್‌ ಮತ್ತು ಎಸ್ಪರ್ ಅವರು ಸೋಮವಾರ‌ ಉಭಯ ರಾಷ್ಟ್ರಗಳ ನಡುವಣ ಮಿಲಿಟರಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ’ ಎಂದು ಅಮೆರಿಕದ ರಕ್ಷಣಾ ಇಲಾಖೆಯ ಪ್ರಕಟಣೆ ತಿಳಿಸಿದೆ.

‘ಮಿತ್ರ ರಾಷ್ಟ್ರಗಳ ನಡುವಣ ಬಾಂಧವ್ಯವು ಎಲ್ಲಾ ಹಂತಗಳಲ್ಲೂ ಪ್ರಗತಿ ಕಂಡಿದೆ’ ಎಂದು ಜೈಶಂಕರ್‌ ಅವರು ಪಾಂಪಿಯೊ ಜೊತೆಗಿನ ಮಾತುಕತೆಯ ಬಳಿಕ ಟ್ವೀಟ್‌ ಮಾಡಿದ್ದಾರೆ.

‘ಭಾರತವು ಶಸ್ತ್ರಾಸ್ತ್ರಗಳಿಗಾಗಿ ರಷ್ಯಾದ ಮೇಲೆ ಅವಲಂಬನೆಯಾಗುವುದನ್ನು ಬಿಟ್ಟು ಅಮೆರಿಕದ ಎಫ್‌–18 ಜೆಟ್‌ಗಳನ್ನು ಖರೀದಿಸಬೇಕು’ ಎಂದು ಎಸ್ಪರ್‌ ಅವರು ಸಲಹೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು