ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರ್ಥ್ಯ ವೃದ್ಧಿಗಾಗಿ ವಾಯುಪಡೆಯಲ್ಲಿ ಮಹತ್ತರ ಬದಲಾವಣೆ: ವಾಯುಪಡೆ ಮುಖ್ಯಸ್ಥ

Last Updated 19 ಜೂನ್ 2021, 8:56 IST
ಅಕ್ಷರ ಗಾತ್ರ

ಹೈದರಾಬಾದ್: ದೇಶದ ನೆರೆ–ಹೊರೆ ಹಾಗೂ ಅದರಾಚೆಗೆ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಅನಿಶ್ಚಿತತೆ ಹಾಗೂ ಭದ್ರತಾ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಭಾರತೀಯ ವಾಯುಪಡೆಯಲ್ಲಿ ಮಹತ್ತರ ಬದಲಾವಣೆಗಳಾಗುತ್ತಿವೆ ಎಂದು ವಾಯುಪಡೆಯ ಮುಖ್ಯಸ್ಥ ಆರ್‌ಕೆಎಸ್ ಭದೌರಿಯಾ ಹೇಳಿದ್ದಾರೆ.

ಇಲ್ಲಿನ ವಾಯುಪಡೆ ಅಕಾಡೆಮಿಯಲ್ಲಿ ಶನಿವಾರ ನಡೆದ ಕಂಬೈನ್ಡ್ ಗ್ರಾಜುಯೇಷನ್ ಪೆರೇಡ್‌(ಸಿಜಿಪಿ) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭದ್ರತಾ ಸವಾಲು ಮತ್ತು ರಾಜಕೀಯ ಅನಿಶ್ಚತತೆಗಳನ್ನು ಎದುರಿಸುವುದಕ್ಕಾಗಿ ವಾಯು ಪಡೆಯಲ್ಲಿ ಭಾರಿ ಪ್ರಮಾಣದಲ್ಲಿ ಪರಿವರ್ತನೆಯಾಗುತ್ತಿದೆ. ಪ್ರತಿ ಹಂತದ ಕಾರ್ಯಾಚರಣೆಯಲ್ಲೂ ಪರಿಣಾಮಕಾರಿಯಾಗಿ ಹೋರಾಡಲು ತ್ವರಿತಗತಿಯಲ್ಲಿ ಸೂಕ್ತ ತಂತ್ರಜ್ಞಾನಗಳೊಂದಿಗೆ ವಾಯುಪಡೆ ಪರಿವರ್ತನೆಯಾಗುತ್ತಿದೆ‘ ಎಂದು ಹೇಳಿದ್ದಾರೆ.

‘ದಶಕಗಳ ಹಿಂದೆ ಎಂಥದ್ದೇ ಸಂಘರ್ಷವನ್ನು ಎದುರಿಸಿ ಗೆಲುವು ಸಾಧಿಸುವಲ್ಲಿ ವಾಯುಪಡೆ ನಿರ್ಣಾಯಕ ಪಾತ್ರವಹಿಸಿದೆ‘ ಎಂದು ಹೇಳಿದ ಅವರು, ಈ ಹಿನ್ನೆಲೆಯಲ್ಲೇ, ಈಗ ವಾಯುಪಡೆಯ ಸಾಮರ್ಥವನ್ನು ವೃದ್ಧಿಸುವ ಮಹತ್ತರ ಪ್ರಯತ್ನ ನಡೆಯುತ್ತಿದೆ‘ ಎಂದರು.

ಇದಕ್ಕೂ ಮುನ್ನ ಪರೇಡ್ ವೀಕ್ಷಿಸಿದ ಭದೌರಿಯಾ, ಕೋವಿಡ್‌ 19 ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಭಾರತೀಯ ವಾಯುಪಡೆ ನಿರ್ಣಾಯಕ ಪಾತ್ರಹಿಸಿರುವ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT