ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌರ್ಯ ಪ್ರಶಸ್ತಿ ಪಡೆದಿದ್ದ ಪಾಕ್ ಸೇನಾಧಿಕಾರಿ ಸಮಾಧಿಗೆ ಭಾರತೀಯ ಸೇನೆಯ ಕಾಯಕಲ್ಪ

ಸಹೃದಯ ನಡೆ
Last Updated 16 ಅಕ್ಟೋಬರ್ 2020, 9:00 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನೌಗಾಮ್ ವಲಯದಲ್ಲಿ ಶಿಥಿಲಗೊಂಡಿದ್ದಪಾಕ್ ಸೇನಾಧಿಕಾರಿಯ ಸಮಾಧಿಗೆಭಾರತೀಯ ಸೇನೆಯು ಕಾಯಕಲ್ಪ ನೀಡಿದೆ. ಈ ಮೂಲಕ 'ವಿಶ್ವದ ಸೈನಿಕ ಇತಿಹಾಸ ಪುಟಗಳಲ್ಲಿ ದಾಖಲಾಗಬೇಕಾದಶ್ಲಾಘನೀಯ ಕ್ರಮವಿದು' ಎಂಬ ಹಿರಿಮೆಗೆ ಈ ಕ್ರಮವು ಪಾತ್ರವಾಗಿದೆ.

ಸಮಾಧಿ ಮೇಲಿರುವ ಅಕ್ಷರಗಳು ಸ್ಪಷ್ಟವಾಗಿ ಕಾಣಿಸುವ ಚಿತ್ರವನ್ನುಶ್ರೀನಗರದಲ್ಲಿ ಮುಖ್ಯ ಕಚೇರಿ ಹೊಂದಿರುವ ಚಿನಾರ್ ಕಾರ್ಪ್ಸ್ ಟ್ವೀಟ್ ಮಾಡಿದೆ. '5ನೇ ಮೇ 1972ರಂದು ಸಿಖ್ ರೆಜಿಮೆಂಟ್‌ನ ಪ್ರತಿದಾಳಿಯಲ್ಲಿ ಸಿತಾ-ಎ-ಜುರಾತ್ ಗೌರವ ಪಡೆದಿದ್ದಮೇಜರ್ ಮೊಹಮದ್ ಶಬೀರ್ ಖಾನ್ ಹುತಾತ್ಮರಾದರು' ಎಂದು ಸಮಾಧಿಯ ಮೇಲೆ ಬರೆಯಲಾಗಿದೆ.

'ಜೀರ್ಣಾವಸ್ಥೆಗೆ ತಲುಪಿದ್ದ ಸಮಾಧಿಯನ್ನು ಭಾರತೀಯ ಸೇನೆಯ ಪರಂಪರೆ ಮತ್ತು ನಂಬಿಕೆಗಳಿಗೆ ಅನುಗುಣವಾಗಿ ಚಿನಾರ್ ಕಾರ್ಪ್ಸ್‌ ಮರುನಿರ್ಮಿಸಿದೆ. ಯಾವುದೇ ದೇಶದವರಾಗಿದ್ದರೂ ಸರಿ, ಮೃತ ಸೈನಿಕನಿಗೆ ಗೌರವ ಸಿಗಬೇಕು. ಆತನ ಸಾವನ್ನು ಗೌರವಿಸಬೇಕು ಎಂಬ ನಂಬಿಕೆಗೆ ಭಾರತೀಯ ಸೇನೆಯು ಬದ್ಧವಾಗಿದೆ' ಎಂದು ಸೇನೆ ಟ್ವೀಟ್‌ನಲ್ಲಿ ಹೇಳಿದೆ.

ಮೃತ ಪಾಕ್ ಯೋಧನ ಅಪ್ಪ-ಅಮ್ಮ ಮಗನ ಸಮಾಧಿ ನೋಡಿ, ಸ್ಮಾರಕ ನಿರ್ಮಾಣವಾಗಬೇಕೆಂದು ಬಯಸಿದ್ದರು. ಅದನ್ನು ಮರಾಠ ರೆಜಿಮೆಂಟ್ ಈಡೇರಿಸಿತ್ತು. ಇದೀಗ ಚಿನಾರ್ ಕಾರ್ಪ್ಸ್‌ ರೆಜಿಮೆಂಟ್ ಸಮಾಧಿಯನ್ನು ಜೀರ್ಣೋದ್ಧಾರ ಮಾಡಿದೆ ಎಂದು ಕರ್ನಲ್‌ ಡಿ.ಬಿ ಟಿಂಗ್ರೆ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT