ಕೊಚ್ಚಿ:ಉಗ್ರ ಸಂಘಟನೆ ಐಸಿಸ್ನಿಂದ ತರಬೇತಿ ಪಡೆದಿದ್ದ ಕೇರಳ ಮೂಲದ ಸುಬಹನಿ ಹಜಾ ಮೊಯಿದೀನ್ ದೋಷಿ ಎಂದು ಎನ್ಐಎ ವಿಶೇಷ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.

ಭಾರತ ಮತ್ತು ಇರಾಕ್ ವಿರುದ್ಧ ಯುದ್ಧ ಹೂಡಲು ಮೊಯಿದೀನ್ ಕ್ರಿಮಿನಲ್ ಸಂಚು ರೂಪಿಸಿದ್ದ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, ಸೆ. 28ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

ಕೇರಳದ ಇಡುಕ್ಕಿ ಜಿಲ್ಲೆಯ ಮೊಯಿದೀನ್, 2015ರ ಏಪ್ರಿಲ್ನಲ್ಲಿ ಐಎಸ್ಐಎಸ್ ಸಂಘಟನೆ ಸೇರ್ಪಡೆಯಾಗಿದ್ದ. ಸಂಘಟನೆಯ ಚಟುವಟಿಕೆಗಳನ್ನು ವಿಸ್ತರಿಸುವ ಸಲುವಾಗಿ ಅದೇ ವರ್ಷ ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಇರಾಕ್ಗೆ ತೆರಳಿದ್ದ. ನಂತರ ಇರಾಕ್ನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ.

‘ಸಂಘಟನೆ ಬಗ್ಗೆ ತಿಳಿದಿತ್ತು ಹಾಗೂ ಉದ್ದೇಶಪೂರ್ವಕವಾಗಿಯೇ ಐಎಸ್ಐಎಸ್ಗೆ ಸೇರ್ಪಡೆಯಾದೆ. ಸಂಘಟನೆಯ ಸದಸ್ಯರೊಂದಿಗೆ ಸಂಪರ್ಕ ಬೆಳೆಸಿದೆ. ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಟೆಲಿಗ್ರಾಮ್ನಂತಹ ವೇದಿಕೆಗಳನ್ನು ಭಾರತ ಮತ್ತು ಇರಾಕ್ ವಿರುದ್ಧ ಯುದ್ಧ ಸಾರುವ ಸಂಚು ರೂಪಿಸಲು ಬಳಸಿಕೊಂಡೆ’ ಎಂಬುದಾಗಿ ಮೊಯಿದೀನ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಸಾಮಾಜಿಕ ಮಾಧ್ಯಮಗಳಲ್ಲಿ ಮೊಯಿದೀನ್ ಹೊಂದಿದ್ದ ಖಾತೆಗಳು ಹಾಗೂ ಇ–ಮೇಲ್ ಮೂಲಕ ವಿನಿಮಯ ಮಾಡಿಕೊಂಡಿದ್ದ ಮಾಹಿತಿಗಳನ್ನು ವಿಚಾರಣೆ ವೇಳೆ ಸಂಗ್ರಹಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.