ಗುರುವಾರ , ಜನವರಿ 20, 2022
15 °C

ರಷ್ಯಾ–ಭಾರತ ಜಂಟಿ ನಿರ್ಮಾಣದ 7ನೇ ಯುದ್ಧ ನೌಕೆ ಉದ್ಘಾಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತೀಯ ನೌಕಾಪಡೆಯ ಏಳನೇ ಯುದ್ಧ ನೌಕೆ ಪಿ1135.6 ಅನ್ನು ರಷ್ಯಾದ ಕಲಿನಿನ್‌ಗ್ರಾಡ್‌ ನಲ್ಲಿರುವ ಯಂತರ್ ಹಡಗು ನಿರ್ಮಾಣ ತಾಣದಲ್ಲಿ (ಶಿಪ್‌ಯಾರ್ಡ್‌) ರಷ್ಯಾದ ಭಾರತೀಯ ರಾಯಭಾರಿ ಡಿ. ಬಾಲಾ ವೆಂಕಟೇಶ್ ವರ್ಮಾ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಉಡಾವಣೆ ಸಮಾರಂಭದಲ್ಲಿ ಈ ಯುದ್ಧ ನೌಕೆಗೆ ‘ತುಶಿಲ್‘ ಎಂದು ಹೆಸರಿಸಲಾಯಿತು. ಇದು ಸಂಸ್ಕೃತ ಪದವಾಗಿದ್ದು, ಇದಕ್ಕೆ ‘ರಕ್ಷಕ ಗುರಾಣಿ‘ ಎಂದು ಅರ್ಥವಿರುವುದಾಗಿ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.

ಅಕ್ಟೋಬರ್ 2016ರಲ್ಲಿ ನಾಲ್ಕು ಹೆಚ್ಚುವರಿ ಪಿ1135.6 ವರ್ಗದ ಯುದ್ಧ ನೌಕೆಗಳನ್ನು ನಿರ್ಮಿಸುವ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಸರ್ಕಾರಗಳು ಜಂಟಿಯಾಗಿ ಸಹಿ ಹಾಕಿದ್ದವು. ರಷ್ಯಾ ಮತ್ತು ಭಾರತದಲ್ಲಿ ತಲಾ ಎರಡು ಯುದ್ಧ ನೌಕೆಗಳನ್ನು ನಿರ್ಮಾಣ ಮಾಡುವುದಾಗಿ ಒಪ್ಪಂದದಲ್ಲಿ ಹೇಳಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು