ಶನಿವಾರ, ಜುಲೈ 31, 2021
27 °C
ದೇಶದ ಮೊದಲ ಉದ್ಯಾನ ಎಂಬ ಹೆಗ್ಗಳಿಕೆ

ಡೆಹ್ರಾಡೂನ್‌ನಲ್ಲಿ ಪಾಚಿ, ಶಿಲೀಂಧ್ರಗಳ ‘ಗಾರ್ಡನ್‌’ ಉದ್ಘಾಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಡೆಹ್ರಾಡೂನ್: ಪಾಚಿ, ಜರೀಗಿಡ (ಕಲ್ಲುಹೂವುಗಳು) ಹಾಗೂ ಶಿಲೀಂಧ್ರಗಳು ಸೇರಿದಂತೆ ಏಕಕೋಶೀಯ ಸಸ್ಯಗಳಿರುವ ದೇಶದ ಮೊದಲ ಉದ್ಯಾನವನ್ನು (ಕ್ರಿಪ್ಟೋಗ್ಯಾಮಿಕ್‌ ಗಾರ್ಡನ್‌) ಡೆಹ್ರಾಡೂನ್‌ ಜಿಲ್ಲೆಯ ಚಕರಾತಾ ಪಟ್ಟಣದಲ್ಲಿ ಭಾನುವಾರ ಉದ್ಘಾಟಿಸಲಾಯಿತು.

ಪಟ್ಟಣದ ದೇವವನದಲ್ಲಿ 50 ಪ್ರಭೇದಗಳಿಗೆ ಸೇರಿದ ಇಂಥ ಸಸ್ಯಗಳನ್ನು ಬೆಳೆಸಲಾಗಿದೆ. 9 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ಈ ಉದ್ಯಾನವನ್ನು ಸಾಮಾಜಿಕ ಕಾರ್ಯಕರ್ತ ಅನೂಪ್‌ ನೌತಿಯಾಲ್ ಉದ್ಘಾಟಿಸಿದರು.

‘ಸಸ್ಯಶಾಸ್ತ್ರದ ಪ್ರಕಾರ, ಪಾಚಿ, ಶಿಲೀಂಧ್ರ, ಜರೀಗಿಡಗಳು ‘ಕ್ರಿಪ್ಟೋಗ್ಯಾಮೆ’ ಪ್ರಭೇದಕ್ಕೆ ಸೇರಿದವುಗಳಾಗಿವೆ. ಇವು ನಾಳ ರಹಿತ ಸಸ್ಯಗಳಾಗಿದ್ದು, ಇವುಗಳು ಹೂವು ಅಥವಾ ಬೀಜಗಳ ಮೂಲಕ ಸಂತಾನೋತ್ಪತ್ತಿ ನಡೆಸುವುದಿಲ್ಲ. ಈ ಸಸ್ಯಗಳು ಕಾಂಡ, ಎಲೆ ಮತ್ತು ಬೇರಿನಂತಹ ಏಕಕೋಶಿಯ ರಚನೆಯನ್ನು ಹೊಂದಿರುತ್ತವೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ಸಂಜೀವ್‌ ಚತುರ್ವೇದಿ ವಿವರಿಸಿದರು.

‘ದೇವವನದಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆ. ಇಲ್ಲಿನ ತೇವಾಂಶ ಸಹ ಇಂಥ ಸಸ್ಯಗಳನ್ನು ಬೆಳೆಯಲು ಸೂಕ್ತವಾದುದು. ಹೀಗಾಗಿ ಈ ಉದ್ಯಾನದ ಮೂರು ಎಕರೆ ಪ್ರದೇಶದಲ್ಲಿ ಈ ಸಸ್ಯಗಳನ್ನು ಬೆಳೆಸಲಾಗಿದೆ’ ಎಂದು ಹೇಳಿದರು.

‘ದೇವವನ ಪ್ರದೇಶದಲ್ಲಿ ದೇವದಾರು ಹಾಗೂ ಓಕ್‌ ಮರಗಳೇ ಹೆಚ್ಚಾಗಿರುವ ಅರಣ್ಯಗಳಿವೆ. ಇಂಥ ಪ್ರದೇಶಗಳು ಪಾಚಿ, ಶಿಲೀಂಧ್ರಗಳಿಗೆ ನೈಸರ್ಗಿಕ ಆಶ್ರಯ ತಾಣಗಳಾಗುತ್ತವೆ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು