ಶುಕ್ರವಾರ, ಡಿಸೆಂಬರ್ 3, 2021
26 °C

ಸ್ವದೇಶಿ ನಿರ್ಮಿತ ವಿಮಾನವಾಹಕ 'ವಿಕ್ರಾಂತ್‌' ಯುದ್ಧನೌಕೆಯ ಪ್ರಯೋಗಾರ್ಥ ಸಂಚಾರ

ಪಿಟಿಐ Updated:

ಅಕ್ಷರ ಗಾತ್ರ : | |

ವಿಮಾನವಾಹಕ ಯುದ್ಧನೌಕೆ (ಐಎಸಿ) ವಿಕ್ರಾಂತ್‌ 

ನವದೆಹಲಿ: ಸ್ವದೇಶಿ ನಿರ್ಮಿತ ಮೊದಲ ವಿಮಾನವಾಹಕ ಯುದ್ಧನೌಕೆ (ಐಎಸಿ) ವಿಕ್ರಾಂತ್‌ ಸಮುದ್ರದಲ್ಲಿ ತನ್ನ ಎರಡನೇ ಪ್ರಯೋಗಾರ್ಥ ಸಮುದ್ರ ಸಂಚಾರವನ್ನು ಭಾನುವಾರ ಆರಂಭಿಸಿತು.

ದೇಶದ ಅತಿದೊಡ್ಡ ಮತ್ತು ಅತ್ಯಂತ ಸಂಕೀರ್ಣದಿಂದ ಕೂಡಿರುವ ಯುದ್ಧನೌಕೆ ಇದಾಗಿದ್ದು, ಮುಂದಿನ ಆಗಸ್ಟ್‌ ವೇಳೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ.

40,000 ಟನ್ ತೂಕದ ವಿಮಾನವಾಹಕ ಯುದ್ಧನೌಕೆ, ಆಗಸ್ಟ್‌ನಲ್ಲಿ ಐದು ದಿನಗಳ ಮೊದಲ ಪ್ರಯೋಗಾರ್ಥ ಸಮುದ್ರ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಯುದ್ಧನೌಕೆಯ ಪ್ರಮುಖ ವ್ಯವಸ್ಥೆಗಳ ಕಾರ್ಯಕ್ಷಮತೆ ತೃಪ್ತಿಕರವಾಗಿದೆ ಎಂದೂ ನೌಕಾಪಡೆ ಹೇಳಿತ್ತು.

ಈ ವಿಮಾನವಾಹಕ ಯುದ್ಧನೌಕೆ ವಿಕ್ರಾಂತ್ ಕೊಚ್ಚಿಯಿಂದ ಭಾನುವಾರ ಪ್ರಯಾಣ ಬೆಳೆಸಿದೆ ಎಂದು ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು