ಭಾನುವಾರ, ಸೆಪ್ಟೆಂಬರ್ 26, 2021
27 °C

'ತೌತೆ'ಗೆ ಸಿಲುಕಿದ್ದ ಟಗ್‌ಬೋಟ್‌ ವರಪ್ರದವನ್ನು ಪತ್ತೆ ಮಾಡಿದ ಐಎನ್‌ಎಸ್‌ ಮಕರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ‘ತೌತೆ’ ಚಂಡಮಾರುತದಿಂದಾಗಿ ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ ಟಗ್‌ ಬೋಟ್‌ ವರಪ್ರದವನ್ನು ಭಾರತೀಯ ನೌಕಾಪಡೆಯ ಐಎನ್‌ಎಸ್‌ ‘ಮಕರ್‌’ ಸೋಮವಾರ ಪತ್ತೆ ಹಚ್ಚಿದೆ.

‘ಮೇ 17ರಂದು ಅರಬ್ಬಿ ಸಮುದ್ರದಲ್ಲಿ ಪಿ305 ಬಾರ್ಜ್‌ ಮತ್ತು ವರಪ್ರದದ 274 ಸಿಬ್ಬಂದಿ ನಾಪತ್ತೆಯಾಗಿದ್ದರು. ಈ ಪೈಕಿ ಬಾರ್ಜ್‌ನಿಂದ 186 ಮಂದಿ ಮತ್ತು ವರಪ್ರದದಿಂದ ಇಬ್ಬರನ್ನು ರಕ್ಷಿಸಲಾಗಿತ್ತು. 70 ಮಂದಿಯ ಶವಗಳು ಸಮುದ್ರದಲ್ಲಿ ಪತ್ತೆಯಾಗಿದ್ದವು. ಸೋಮವಾರ 274 ಸಿಬ್ಬಂದಿ ಪೈಕಿ ಬಾಕಿ ಉಳಿದಿದ್ದ 16 ಮಂದಿಯ ಶವವೂ ಮಹಾರಾಷ್ಟ್ರ ಮತ್ತು ಗುಜರಾತ್‌ ಕರಾವಳಿಯಲ್ಲಿ ಪತ್ತೆಯಾಗಿವೆ’ ಎಂದು ನೌಕಾಪಡೆಯ ವಕ್ತಾರರು ತಿಳಿಸಿದರು.

‘ಈ ಮೂಲಕ ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ 274 ಸಿಬ್ಬಂದಿಯ ಲೆಕ್ಕಚಾರ ಸಿಕ್ಕಿವೆ.ಹಾಗಿದ್ದರೂ ಒಂದು ವೇಳೆ ಯಾರದರೂ ಬಾಕಿ ಉಳಿದಿದ್ದರೆ, ಅವರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನೌಕಾಪಡೆಯ ಈಜುಗಾರರು ತೊಡಗಿದ್ದಾರೆ’ ಅವರು ಮಾಹಿತಿ ನೀಡಿದರು.

ಹಾನಿಗೊಳಗಾದ ಪಿ305 ಬಾರ್ಜ್‌ ಅನ್ನು ಕೂಡ ಐಎನ್‌ಎಸ್‌ ಮಕರ್‌ ಶನಿವಾರ  ಪತ್ತೆ ಹಚ್ಚಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು