ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ಅಧಿಕಾರಿಗಳ ಬಂಧನ ವಿರುದ್ಧ ಮಧ್ಯಂತರ ತಡೆಯಾಜ್ಞೆ

Last Updated 26 ಜುಲೈ 2021, 11:35 IST
ಅಕ್ಷರ ಗಾತ್ರ

ಕೊಚ್ಚಿ: ಇಸ್ರೊ ಬೇಹುಗಾರಿಕೆ ಸಂಬಂಧ ವಿಜ್ಞಾನಿ ನಂಬಿ ನಾರಾಯಣನ್ ಬಂಧನ ಪ್ರಕರಣದಲ್ಲಿ ಸಿಬಿಐ ದಾಖಲಿಸಿದ್ದ ಕ್ರಿಮಿನಲ್‌ ಸಂಚು, ಅಪಹರಣ, ಸಾಕ್ಷ್ಯ ತಿರುಚುವಿಕೆ ಕುರಿತ ದೂರಿಗೆ ಸಂಬಂಧಿಸಿಇಬ್ಬರು ಮಾಜಿ ಪೊಲೀಸ್‌ ಅಧಿಕಾರಿಗಳನ್ನು ಬಂಧಿಸುವುದರ ವಿರುದ್ಧ ಕೇರಳ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

ನಿರೀಕ್ಷಣಾ ಜಾಮೀನು ಕೋರಿ ಎಸ್‌.ವಿಜಯನ್‌ ಮತ್ತು ತಂಪಿ ಎಸ್‌.ದುರ್ಗ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ನ್ಯಾಯಮೂರ್ತಿ ಅಶೋಕ್‌ ಮೋಹನ್‌ ಈ ಆದೇಶ ಹೊರಡಿಸಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

ಸಿಬಿಐ ಪರ ವಕೀಲ ಸುವಿನ್‌ ಆರ್.ಮೆನನ್‌ ಅವರು, ಈ ಅಧಿಕಾರಿಗಳನ್ನು ಬಂಧಿಸಿದರೂ ₹ 50 ಸಾವಿರ ಮೌಲ್ಯದ ಬಾಂಡ್‌, ಇಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಆಧರಿಸಿ ಬಿಡುಗಡೆಗೆ ಸೂಚಿಸಿದೆ ಎಂದು ಹೇಳಿದರು.

ಬಂಧನದ ವಿರುದ್ಧದ ತಡೆಯಾಜ್ಞೆ ಆದೇಶದ ಅವಧಿಯು ಪ್ರಕರಣದ ಮುಂದಿನ ವಿಚಾರಣೆಯು ನಡೆಯಲಿರುವ ಆಗಸ್ಟ್ 2ರವರೆಗೂ ಚಾಲ್ತಿಯಲ್ಲಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT