ಶುಕ್ರವಾರ, ಮಾರ್ಚ್ 24, 2023
31 °C

ಸಾವರ್ಕರ್ ಬ್ರಿಟಿಷರ ಜತೆ ಸ್ನೇಹ ಬೆಳೆಸಿದ್ದು, ಕ್ಷಮೆ ಕೇಳಿದ್ದರು: ತುಷಾರ್ ಗಾಂಧಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೀರ ಸಾವರ್ಕರ್ ಅವರು ಬ್ರಿಟಿಷರೊಂದಿಗೆ ಸ್ನೇಹ ಬೆಳೆಸಿದ್ದು ನಿಜ, ಜೈಲಿನಿಂದ ಹೊರಬರಲು ಬ್ರಿಟಿಷರ ಬಳಿ ಕ್ಷಮೆ ಯಾಚಿಸಿದ್ದರು ಎಂದು ಮಹಾತ್ಮ ಗಾಂಧಿ ಅವರು ಮೊಮ್ಮಗ ತುಷಾರ್ ಗಾಂಧಿ ಹೇಳಿದ್ದಾರೆ. 

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆಯಲ್ಲಿ, ಮಹಾತ್ಮ ಗಾಂಧಿ ಅವರ ಮೊಮ್ಮಗ ತುಷಾರ್ ಗಾಂಧಿ ಶುಕ್ರವಾರ ಭಾಗಿಯಾಗಿದ್ದಾರೆ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾವರ್ಕರ್ ಅವರು ಬ್ರಿಟಿಷರೊಂದಿಗೆ ಸ್ನೇಹ ಬೆಳೆಸಿದ್ದು ಸತ್ಯ. ಈ ವಿಷಯವನ್ನು ನಾವು ವಾಟ್ಸ್‌ಆ್ಯಪ್ ಯೂನಿವರ್ಸಿಟಿಯಿಂದ ತೆಗೆದುಕೊಂಡಿದ್ದಲ್ಲ, ಇತಿಹಾಸದಲ್ಲಿ ಸಾಕ್ಷಿ ಇದೆ’ ಎಂದು ಹೇಳಿದ್ದಾರೆ. 

‘ಪಾದಯಾತ್ರೆಗಳು ಸಂಪ್ರದಾಯದ ಭಾಗವಾಗಿದ್ದು, ಯಾತ್ರೆಗಳು ಹಲವಾರು ಕ್ರಾಂತಿಗಳಿಗೆ ಜನ್ಮ ನೀಡಿವೆ. ಇಂದು ನಮ್ಮ ದೇಶ ಪೂರ್ವಜರು ರೂಪಿಸಿದ ನೀತಿ ನಿಯಮಗಳ ವಿರುದ್ಧ ಸಾಗುತ್ತಿರುವುದನ್ನು ಕಾಣಬಹುದು. ಆದರೆ, ನಾವು ಅವುಗಳನ್ನು ಬಿಟ್ಟುಕೊಟ್ಟಿಲ್ಲ ಎಂಬುದನ್ನು ಜನರು ಅರಿತುಕೊಳ್ಳುವುದು ಮುಖ್ಯ’ ಎಂದು ತುಷಾರ್ ತಿಳಿಸಿದ್ದಾರೆ. 

‘ಹಿಂದುತ್ವವಾದಿ ವಿ.ಡಿ.ಸಾವರ್ಕರ್‌ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದರು. ಅಲ್ಲದೆ, ಕ್ಷಮಾದಾನ ಕೋರಿ ಪತ್ರವನ್ನೂ ಬರೆದಿದ್ದರು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದರು. 

ರಾಹುಲ್ ಹೇಳಿಕೆ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ, ‘ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಬೆಳೆದ ರಾಜಕೀಯ ನಿರುದ್ಯೋಗಿ ರಾಹುಲ್ ಗಾಂಧಿ ಅವರು ವೀರ ಸಾವರ್ಕರ್‌ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ’ ಎಂದು ತಿರುಗೇಟು ನೀಡಿದೆ. 

ಇವನ್ನೂ ಓದಿ... 

ಸಾವರ್ಕರ್‌ರನ್ನು ಇಂದಿರಾ ಗಾಂಧಿ ‘ಭಾರತದ ವೀರ ಸುಪುತ್ರ’ ಎಂದಿದ್ದರು: ಬಿಜೆಪಿ

ರಾಜಕೀಯ ನಿರುದ್ಯೋಗಿ ರಾಹುಲ್ ಸಾವರ್ಕರ್ ಬಗ್ಗೆ ಮಾತನಾಡಿದ್ದು ಹಾಸ್ಯಾಸ್ಪದ: ಬಿಜೆಪಿ 

ಮತದಾರರ ಪಟ್ಟಿ ಪರಿಷ್ಕರಣೆ ಎಂದರೆ ರಾಕಿಭಾಯ್‌ನ ಸೇಡಿನ ಕಥೆಯಲ್ಲ: ಸಿದ್ದರಾಮಯ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು