ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರಪ್ರದೇಶ: ‘ಸುಪ್ರೀಂ’ ನಿರ್ದೇಶನ ಆಧರಿಸಿ 10, 12ನೇ ಪರೀಕ್ಷೆ ರದ್ದು

Last Updated 24 ಜೂನ್ 2021, 17:04 IST
ಅಕ್ಷರ ಗಾತ್ರ

ಹೈದರಾಬಾದ್: ಕೋವಿಡ್‌ ಪರಿಸ್ಥಿತಿಯ ನಡುವೆಯೇ ವಾರ್ಷಿಕ ಪರೀಕ್ಷೆಯನ್ನು ಆಯೋಜಿಸಲು ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಸುಪ್ರೀಂ ಕೋರ್ಟ್‌ ಕಟುವಾಗಿ ಪ್ರಶ್ನಿಸಿದ ಹಿಂದೆಯೇ, ಆಂಧ್ರಪ್ರದೇಶ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದ 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಪಡಿಸಲು ತೀರ್ಮಾನಿಸಿದೆ.

ಆಂಧ್ರಪ್ರದೇಶ ಸರ್ಕಾರ ಪರೀಕ್ಷೆ ನಡೆಸಲು ಮುಂದಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಗುರುವಾರ ನಡೆಸಿತು. ಕೋವಿಡ್‌ ಕಾರಣದಿಂದ ಎಲ್ಲ ಮಂಡಳಿಗಳು ಪರೀಕ್ಷೆ ರದ್ದುಪಡಿಸಿ, ಆಂತರಿಕ ಮೌಲ್ಯಮಾಪನಕ್ಕೆ ಮುಂದಾಗಿವೆ. ಸರ್ಕಾರ ಹೇಗೆ ಪರೀಕ್ಷೆ ನಡೆಸಲು ನಿರ್ಧರಿಸಿತು ಎಂದು ಪ್ರಶ್ನಿಸಿತು.

ಕೋವಿಡ್‌ನಿಂದಾಗಿ ಕಳೆದ ಎರಡು ತಿಂಗಳು ಮೂಡಿದ್ದ ಆರೋಗ್ಯ ಕ್ಷೇತ್ರದ ಸಂಕಷ್ಟ ಮತ್ತು ಸಂಭವನೀಯ ಮೂರನೇ ಅಲೆ ಎಚ್ಚರಿಕೆಯನ್ನು ಉಲ್ಲೇಖಿಸಿದ ಕೋರ್ಟ್‌, ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಏನಾದರೂ ಅವಘಡ ಸಂಭವಿಸಿದ್ದಲ್ಲಿ ತಲಾ ₹ 1 ಕೋಟಿ ಪರಿಹಾರ ನೀಡಲು ಆದೇಶಿಸಬೇಕಾದಿತು ಎಂದೂ ಎಚ್ಚರಿಸಿತ್ತು.

ಸುರಕ್ಷಿತವಾಗಿ ಪರೀಕ್ಷೆಯನ್ನು ಆಯೋಜಿಸಲು ಪ್ರತಿ ಕೊಠಡಿಗೆ 15–10 ವಿದ್ಯಾರ್ಥಿಗಳಂತೆ 34 ಸಾವಿರ ಕೊಠಡಿಗಳ ಅಗತ್ಯವಿದೆ. ಇಷ್ಟು ಕೊಠಡಿಗಳನ್ನು ಹೇಗೆ ಸರ್ಕಾರ ಹೊಂದಾಣಿಸಲಿದೆ ಎಂದು ಕೋರ್ಟ್‌ ಇದೇ ಸಂದರ್ಭದಲ್ಲಿ ಆಶ್ಚರ್ಯ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT