ನವದೆಹಲಿ(ಪಿಟಿಐ): ದೆಹಲಿಯ ಜಹಾಂಗೀರ್‌ಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಜಹಾಂಗೀರ್‌ಪುರದ ನಿವಾಸಿಗಳಾದ ಯೂನುಸ್(48) ಮತ್ತು ಶೇಖ್ ಸಲೀಂ(22) ಬಂಧಿತ ಆರೋಪಿಗಳು. ಇವರ ಬಂಧನದೊಂದಿಗೆ ಪ್ರಕರಣದ ಒಟ್ಟು ಬಂಧಿತರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಇದರಲ್ಲಿ ಮೂವರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳು ಸೇರಿದ್ದಾರೆ.

ಯೂನುಸ್ ಮತು ಸಲೀಂ ಹಿಂಸಾಚಾರದಲ್ಲಿ ತೊಡಗಿದ್ದ ಗುಂಪಿಗೆ ಆಯುಧಗಳನ್ನು ವಿತರಣೆ ಮಾಡುತ್ತಿದ್ದದ್ದು ತನಿಖೆ ಮತ್ತು ಸಿಸಿಟಿವಿ ವಿಡಿಯೊದಿಂದ ತಿಳಿದು ಬಂದಿದೆ. ಇದನ್ನು ಆಧರಿಸಿ ನಮ್ಮ ತಂಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಿತ್ತು. ಆದರೆ ಅವರು ನಾಪತ್ತೆಯಾಗಿದ್ದರು. ಇವರನ್ನು ಭಾನುವಾರ ರಾತ್ರಿ ಜಹಾಂಗೀರ್‌ಪುರದಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏಪ್ರಿಲ್ 16 ರಂದು ಹನುಮ ಜಯಂತಿ ವೇಳೆ ಕಲ್ಲು ತೂರಾಟ ನಡೆದು ಎರಡು ಕೋಮುವಿನ ನಡುವೆ ಘರ್ಷಣೆ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.