ಶನಿವಾರ, ಅಕ್ಟೋಬರ್ 23, 2021
20 °C
ಜಲಶಕ್ತಿ ಸಚಿವಾಲಯದಿಂದ ಜಲಜೀವನ್‌ ಮಿಷನ್ ಯೋಜನೆಯ ಅಂಕಿ ಅಂಶ ಬಿಡುಗಡೆ

ಜಲಜೀವನ್‌ ಮಿಷನ್: ಈವರೆಗೆ ಶೇ 43ರಷ್ಟು ಮನೆಗಳಿಗೆ ನಲ್ಲಿ ನೀರು ಸಂಪರ್ಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜಲಜೀವನ್‌ ಮಿಷನ್‌ನಡಿ ಗ್ರಾಮೀಣ ಭಾಗದಲ್ಲಿ ಈವರೆಗೆ ಶೇಕಡಾ 43ರಷ್ಟು ಮನೆಗಳಿಗೆ ನಲ್ಲಿ ನೀರಿನ ಸೌಲಭ್ಯ ಒದಗಿಸಲಾಗಿದೆ. ಆರು ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇಕಡಾ 100ರಷ್ಟು ಮನೆಗಳು ಈ ಸೌಕರ್ಯ ಪಡೆದಿವೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳಿವೆ.

ಆದರೆ ಏಳು ರಾಜ್ಯಗಳಲ್ಲಿ  ಶೇಕಡಾ 25ರಷ್ಟು ಮನೆಗಳು ಮಾತ್ರ ನಲ್ಲಿ ನೀರಿನ ಸೌಲಭ್ಯ ಹೊಂದಿವೆ. ಈ ಪ್ರದೇಶಗಳೆಂದರೆ ಅಸ್ಸಾಂ (ಶೇ 22), ರಾಜಸ್ಥಾನ (ಶೇ 20.89), ಲಡಾಖ್‌ (ಶೇ 16.32), ಜಾರ್ಖಂಡ್‌ (ಶೇ 15.12), ಪಶ್ಚಿಮ ಬಂಗಾಳ (ಶೇ 13.48), ಛತ್ತೀಸಗಡ (ಶೇ 13.17) ಹಾಗೂ ಉತ್ತರ ಪ್ರದೇಶ (ಶೇ12.72).

ಜಲಶಕ್ತಿ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಒಟ್ಟು 19,22,49,980 ಮನೆಗಳ ಪೈಕಿ 8,31,03,880 ಮನೆಗಳು ಮಾತ್ರ ಅಂದರೆ ಶೇಕಡಾ 43,23 ಮನೆಗಳು ಈವರೆಗೆ ನಲ್ಲಿನೀರಿನ ಸಂಪರ್ಕ ಹೊಂದಿವೆ.

2019ರಲ್ಲಿ ಜಲಶಕ್ತಿ ಮಿಷನ್‌ ಆರಂಭಗೊಂಡ ಬಳಿಕ ಶೇ 26.89ರಷ್ಟು ಅಂದರೆ 5,07,41,042 ಮನೆಗಳಿಗೆ ಸಂಪರ್ಕ ಒದಗಿಸಲಾಗಿದೆ.

ಗೋವಾ, ತೆಲಂಗಾಣ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು, ಪುದುಚೇರಿ, ದಾದ್ರ ಮತ್ತು ನಗರ್‌ ಹವೇಲಿಯಲ್ಲಿ ಶೇಕಡ ನೂರರಷ್ಟು ಮನೆಗಳಿಗೆ ಈ ಸಂಪರ್ಕ ಕಲ್ಪಿಸಲಾಗಿದೆ.

ಗ್ರಾಮೀಣ ಭಾರತದ ಎಲ್ಲಾ ಮನೆಗಳಿಗೆ 2024ರ ವೇಳೆಗೆ ನಲ್ಲಿ ನೀರು ಸಂಪರ್ಕ ಕಲ್ಪಿಸುವ ಗುರಿಯನ್ನು ಜಲಜೀವನ್‌ ಮಿಷನ್‌ ಹೊಂದಿದೆ. ಕಳೆದ ವಾರ ಜಲಶಕ್ತಿ ಸಚಿವಾಲಯವು ಈ ಯೋಜನೆಯ ಅನುಷ್ಠಾನದ ಬಗ್ಗೆ ಸಭೆ ನಡೆಸಿದ್ದು ರಾಜ್ಯಗಳಲ್ಲಿ ಆಗಿರುವ ಪ್ರಗತಿ ಪರಿಶೀಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ... ವಿಪರೀತ ಮಳೆಯಿಂದ ಕಲ್ಲಿದ್ದಲು ಕೊರತೆ: ರಾಜ್ಯಗಳಿಗೆ ಕಾಡಲಿದೆಯೇ ವಿದ್ಯುತ್ ಸಮಸ್ಯೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು