ಭಾನುವಾರ, ಮೇ 9, 2021
27 °C
ಸಂಬಂಧಿ ನೇಮಕ ವಿವಾದ.

ಕೇರಳ: ಉನ್ನತ ಶಿಕ್ಷಣ ಸಚಿವರ ರಾಜೀನಾಮೆ ಸದ್ಯಕ್ಕಿಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ‘ಸಂಬಂಧಿಗೆ ಉದ್ಯೋಗವನ್ನು ಕೊಡಿಸಲು ಸಚಿವ ಸ್ಥಾನದ ಪ್ರಭಾವ ಬಳಸಿರುವ ಬಗ್ಗೆ ಲೋಕಾಯುಕ್ತರಿಂದ ಪ್ರತಿಕೂಲ ವರದಿ ಇದ್ದರೂ, ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಅವರು ತಕ್ಷಣಕ್ಕೆ ರಾಜೀನಾಮೆ ಕೊಡುವುದಿಲ್ಲ’ ಎಂದು ಕಾನೂನು ಸಚಿವ ಎ.ಕೆ.ಬಾಲನ್‌ ಅವರು ತಿಳಿಸಿದ್ದಾರೆ.

‘ಜಲೀಲ್ ಅವರಿಗೆ ವಿವಿಧ ಕಾನೂನು ಆಯ್ಕೆಗಳಿವೆ. ಲೋಕಾಯುಕ್ತ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತರಬಹುದು. ಅಲ್ಲದೆ, ಲೋಕಾಯುಕ್ತ ವರದಿ ಆಧರಿಸಿ ಕ್ರಮಕೈಗೊಳ್ಳಲು ಮುಖ್ಯಮಂತ್ರಿಗೆ ಮೂರು ತಿಂಗಳ ಅವಕಾಶವಿದೆ‘ ಎಂದು ಅವರು ಶನಿವಾರ ಹೇಳಿದರು.

ಲೋಕಾಯುಕ್ತ ಅವರ ವರದಿ ಹಿನ್ನೆಲೆಯಲ್ಲಿ ಜಲೀಲ್‌ ಅವರು ತಕ್ಷಣವೇ ರಾಜೀನಾಮೆ ಕೊಡಬೇಕು ಎಂದು ಈಗ  ಒತ್ತಾಯಿಸುತ್ತಿರುವರು, ರಾಜ್ಯದಲ್ಲಿ ಅಂತಹ ಯಾವುದೇ ನಿದರ್ಶನವಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಕೆಳಹಂತದ ಕೋರ್ಟ್ ಅಭಿಪ್ರಾಯ ಆಧರಿಸಿ ಯಾರಾದರೂ ರಾಜೀನಾಮೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಜಲೀಲ್‌ ಅವರ ಸಂಬಂಧಿ ಕೆ.ಟಿ.ಅದೀಬ್‌ ಅವರು ಅನುಕಂಪದ ಆಧಾರದಲ್ಲಿ ನೇಮಕವಾಗಿದ್ದಾರೆ. ಅವರು ಅರ್ಹರಿದ್ದರೆ, ಇಲ್ಲವೇ ಎಂಬುದನ್ನಷ್ಟೇ ಪರಿಶೀಲಿಸಬೇಕು. ಸಂಬಂಧಿಗಳು ನೇಮಕವಾಗಬಾರದು ಎಂದು ಯಾವುದೇ ಕಾಯ್ದೆಯೂ ಹೇಳಿಲ್ಲ ಎಂದು ಬಾಲನ್‌ ಅವರು ಸಮರ್ಥಿಸಿಕೊಂಡರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು