ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಪುಲ್ವಾಮದ ಜೈಷ್- ಇ-ಮೊಹಮ್ಮದ್ ಕಮಾಂಡರ್ ಮನೆ ಕೆಡವಿದ ಜಿಲ್ಲಾಡಳಿತ

Last Updated 10 ಡಿಸೆಂಬರ್ 2022, 16:52 IST
ಅಕ್ಷರ ಗಾತ್ರ

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರಗಾಮಿ ಸಂಘಟನೆ ಜೈಷ್- ಇ-ಮೊಹಮ್ಮದ್(ಜೆಇಎಂ) ಕಮಾಂಡರ್ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಮನೆಯನ್ನು ಉರುಳಿಸಲಾಗಿದೆ.

ಕಾಶ್ಮೀರದಲ್ಲಿಉಗ್ರಗಾಮಿಯೊಬ್ಬನ ನಿವಾಸವನ್ನು ಸರ್ಕಾರಿ ಅಧಿಕಾರಿಗಳು ಉರುಳಿಸಿದ ಮೊದಲ ಪ್ರಕರಣ ಇದಾಗಿದೆ.

ಪುಲ್ವಾಮಾದ ರಾಜಪೋರಾದ ಉಗ್ರಗಾಮಿ ಆಶಿಕ್ ಅಹಮ್ಮದ್ ನೆಂಗ್ರೂ ಅಲಿಯಾಸ್ ಅಮ್ಜಿದ್ ಬಾಯ್ ಆಫ್ ಅಜಾನ್ ಬಾಲ ಎಂಬಾತನ ಮನೆಯನ್ನು ಕೆಡವಲಾಗಿದೆ.

40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ 2019ರ ಲೆಥ್ ಪೋರ ಫಿದಾಯೀನ್‌ನ ಆತ್ಮಹತ್ಯಾ ಬಾಂಬ್ ದಾಳಿ ಪ್ರಕರಣದಲ್ಲಿ ಈತನ ಕೈವಾಡವಿತ್ತು.

ಈ ವರ್ಷದ ಏಪ್ರಿಲ್‌ನಲ್ಲಿ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ಕೇಂದ್ರ ಸರ್ಕಾರ ನೆಂಗ್ರೂನನ್ನು ಭಯೋತ್ಪಾದಕ ಎಂದು ಘೋಷಿಸಿ‌ತ್ತು. ನೆಂಗ್ರೂಗೆ ಸೇರಿದ ಎರಡು ಅಂತಸ್ತಿನ ಮನೆಯನ್ನು ಜಿಲ್ಲಾಡಳಿತ ಪುಲ್ವಾಮಾ ಪೊಲೀಸರ ಸಮ್ಮುಖದಲ್ಲಿ ನೆಲಸಮಗೊಳಿಸಿದೆ ಎಂದು ವರದಿಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT