ಶುಕ್ರವಾರ, ಮೇ 20, 2022
23 °C

ಜೆಎನ್‌ಯು ಪುನರಾರಂಭ: ಸ್ನಾತಕೋತ್ಸರ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅವಕಾಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಲ್ಲಿನ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ತನ್ನ ನಾಲ್ಕನೇ ಸೆಮಿಸ್ಟರ್‌ನ ಎಂ.ಫಿಲ್‌ ಮತ್ತು ಎಂ.ಟೆಕ್, ಅಂತಿಮ ವರ್ಷದ ಎಂಬಿಎ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಕಾಲೇಜಿಗೆ ಬರಲು ಅನುಮತಿ ನೀಡಿದೆ.

ಈ ಕುರಿತು ವಿಶ್ವವಿದ್ಯಾಲಯ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ, ವಿಶ್ವವಿದ್ಯಾಲಯದಲ್ಲಿ ವಿಶೇಷ ಅಧ್ಯಯನದಲ್ಲಿ ತೊಡಗಿರುವ ವಿದ್ವಾಂಸರು (ಡೇ ಸ್ಕಾಲರ್ಸ್‌) ಮತ್ತು ವಸತಿ ನಿಲಯದ ವಿದ್ಯಾರ್ಥಿಗಳಿಗೂ ಸೋಮವಾರದಿಂದ ಕಾಲೇಜು ಕ್ಯಾಪಸ್‌ಗೆ ಮರಳುವಂತೆ ಸೂಚಿಸಿದೆ. ಪ್ರಯೋಗಾಲಯದ ಅವಶ್ಯಕತೆ ಇರುವ ವಿದ್ಯಾರ್ಥಿಗಳು ಜೂನ್ 30ರೊಳಗೆ ತಮ್ಮ ಡೆಸರ್ಟೇಷನ್ ಅಥವಾ ಥೀಸೀಸ್ ಅನ್ನು ಸಲ್ಲಿಸುವಂತೆ ಅವಕಾಶ ನೀಡಲಾಗಿದೆ.

ಇದೇ ವೇಳೆ, ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಟೀ ಅಂಗಡಿ, ಕಾಂಡಿಮೆಂಟ್ಸ್‌ ಸ್ಟೋರ್, ಹಾಸ್ಟೆಲ್‌, ವಸತಿ ನಿಲಯಗಳ ಪ್ರದೇಶದಲ್ಲಿರುವ ಶಾಪಿಂಗ್ ಸಂಕೀರ್ಣಗಳು ಸೇರಿದಂತೆ ಅಧಿಕೃತ ಮಳಿಗೆಗಳನ್ನು ತಕ್ಷಣದಿಂದ ತೆರೆಯುವಂತೆ ಪ್ರಕಟಿಸಲಾಗಿದೆ. ಆದರೆ, ಡಾಬಾ ಮತ್ತು ಕ್ಯಾಂಟೀನ್‌ಗಳನ್ನು ತೆರೆಯಲು ಅನುಮತಿ ನೀಡಿಲ್ಲ. ಕ್ರೀಡಾ ಸಂಕೀರ್ಣದಲ್ಲಿ ಯೋಗ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು