ಶುಕ್ರವಾರ, ಮೇ 27, 2022
28 °C

ಹಿಂದೂಗಳು ಹೆಚ್ಚು ಮಕ್ಕಳನ್ನು ಹೆರಬೇಕು: ಕಾಳಿಚರಣ್ ಮಹಾರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ‘ದೇಶದಲ್ಲಿ ಇರುವುದು ಒಂದೇ ಧರ್ಮ, ಅದೂ ಸನಾತನ ಧರ್ಮ. ಹಿಂದೂಗಳು ಧರ್ಮದ ಆಧಾರದ ಮೇಲೆ ಒಗ್ಗೂಡಿ ಮತ ಚಲಾಯಿಸಬೇಕು. ಭಾರತವನ್ನು ಹಿಂದೂ ರಾಷ್ಟ್ರವಾಗಿಸಬೇಕು’ ಎಂದು ಇಬ್ಬರು ವಿವಾದಿತ ಹಿಂದೂ ಸ್ವಾಮೀಜಿಗಳು ಹೇಳಿದ್ದಾರೆ.

ಉತ್ತರ ಪ್ರದೇಶದ ಅಲಿಗಡ ಪಟ್ಟಣದಲ್ಲಿ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಕಾಳಿಚರಣ್ ಮಹಾರಾಜ್ ಸ್ವಾಮೀಜಿ ಮತ್ತು ಯತಿ ನರಸಿಂಹಾನಂದ ಸರಸ್ವತಿ ಅವರು, ‘ದೇಶವು ಇಸ್ಲಾಮಿಕ್ ರಾಷ್ಟ್ರವಾಗಿ ಬದಲಾಗಬಾರದು ಮತ್ತು ಮುಸ್ಲಿಮರು ಪ್ರಧಾನಿಯಾಗಬಾರದು. ಅದಕ್ಕಾಗಿ ಹಿಂದೂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರಬೇಕು. ಧರ್ಮದ ಆಧರಿತವಾಗಿಯೇ ಮತ ಚಲಾಯಿಸಬೇಕು’ ಎಂದರು.

‘ನಾವೆಲ್ಲರೂ ಒಗ್ಗೂಡದಿದ್ದರೆ, ಹಿಂದೂ ಧರ್ಮ ಬೆಂಬಲಿಸದಿದ್ದರೆ ನಮ್ಮ ಮಹಿಳೆಯರಿಗೆ ಸುರಕ್ಷತೆ  ಇರುವುದಿಲ್ಲ. ಪ್ರಧಾನಿ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬೆಂಬಲಿಸಬೇಕು’ ಎಂದು ಕಾಳಿಚರಣ್ ಮಹಾರಾಜ್ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.