ಭಾನುವಾರ, ಏಪ್ರಿಲ್ 11, 2021
27 °C
ಎಐಎಸ್ಎಂಕೆ ಮತ್ತು ಐಜೆಕೆ ಪಕ್ಷಗಳೊಂದಿಗೆ ಸೀಟು ಹಂಚಿಕೆ

ತಮಿಳುನಾಡು ವಿಧಾನಸಭಾ ಚುನಾವಣೆ: 154 ಕ್ಷೇತ್ರಗಳಲ್ಲಿ ಕಮಲಹಾಸನ್‌ ಪಕ್ಷ ಸ್ಪರ್ಧೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ, ರಾಜಕಾರಣಿ ಕಮಲ್‌ ಹಾಸನ್‌ ನೇತೃತ್ವದ ಮಕ್ಕಳ್‌ ನೀಧಿ ಮಯಂ ಪಕ್ಷ (ಎಂಎನ್‌ಎಂ) 154 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಉಳಿದ 80 ಕ್ಷೇತ್ರಗಳಲ್ಲಿ ತಲಾ 40 ಕ್ಷೇತ್ರಗಳನ್ನು ತನ್ನ ಮಿತ್ರಪಕ್ಷವಾದ ನಟ, ರಾಜಕಾರಣಿ ಶರತ್‌ ಕುಮಾರ್ ಅವರ ಅಖಿಲ ಭಾರತ ಸಮತುವಾ ಮಕ್ಕಳ್‌ ಕಚ್ಚಿ (ಎಐಎಸ್‌ಎಂಕೆ)  ಮತ್ತು ಭಾರತೀಯ ಜನನಾಯಕ ಕಚ್ಚಿ (ಐಜೆಕೆ) ಪಕ್ಷಗಳಿಗೆ ಬಿಟ್ಟುಕೊಟ್ಟಿದೆ.

ತಮಿಳುನಾಡಿನ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಮೂರೂ ಪಕ್ಷಗಳೂ ಬದ್ಧವಾಗಿರುವುದಾಗಿ ಈ ಪಕ್ಷಗಳ ಚುನಾವಣಾ ಒಪ್ಪಂದಲ್ಲಿ ಹೇಳಲಾಗಿದೆ.

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 6ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು