ಬುಧವಾರ, ಮಾರ್ಚ್ 29, 2023
32 °C

ಜಮ್ಮು ವಿಮಾನ ನಿಲ್ದಾಣದ ನೂತನ ಟರ್ಮಿನಲ್‌ಗೆ ಮಹಾರಾಜ ಹರಿ ಸಿಂಗ್ ಹೆಸರಿಡಿ: ಕರಣ್

ಪಿಟಿಐ Updated:

ಅಕ್ಷರ ಗಾತ್ರ : | |

ಜಮ್ಮು: ಜಮ್ಮು ವಿಮಾನ ನಿಲ್ದಾಣದಲ್ಲಿನ ನೂತನ ಟರ್ಮಿನಲ್‌ಗೆ ತಮ್ಮ ತಂದೆ ‘ಮಹಾರಾಜ ಹರಿ ಸಿಂಗ್‘ ಅವರ ಹೆಸರಿಡಲು ಶಿಫಾರಸು ಮಾಡುವಂತೆ ಮಾಜಿ ಸಂಸದ ಕರಣ್ ಸಿಂಗ್ ಅವರು ಜಮ್ಮು–ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್‌ ಸಿನ್ಹಾ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಸಿನ್ಹಾ ಅವರಿಗೆ ಪತ್ರ ಬರೆದಿರುವ ಸಿಂಗ್, ‘ಜಮ್ಮು ವಿಮಾನ ನಿಲ್ದಾಣವನ್ನು ನನ್ನ ತಂದೆ ಮಹಾರಾಜ ಹರಿ ಸಿಂಗ್ ನಿರ್ಮಾಣ ಮಾಡಿದ್ದಾರೆ. ಅದನ್ನು ಬಹಳ ವರ್ಷಗಳ ಕಾಲ ಬಳಸುತ್ತಿದ್ದರು’ ಎಂದು ವಿವರಿಸಿದ್ದಾರೆ.

‘ಸದ್ಯ ಜಮ್ಮ ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಇಲ್ಲ. ಹಾಗಾಗಿ ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಹೆಸರಿಡುವ ವಿಚಾರವನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ನೀವು ಶಿಫಾರಸು ಮಾಡಬಹುದು. ನಿಮ್ಮ ಈ ಕಾರ್ಯವನ್ನು ಜಮ್ಮುವಿನ ಜನರು ಬಹಳವಾಗಿ ಮೆಚ್ಚುತ್ತಾರೆಂಬ ವಿಶ್ವಾಸ ನನಗಿದೆ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು