ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಾದ್ರಿ ದೇವಸ್ಥಾನಕ್ಕೆ ಕೆಸಿಆರ್ ಭೇಟಿ: ಒಂದು ಕೆಜಿ ಚಿನ್ನ ಸಮರ್ಪಣೆ

Last Updated 30 ಸೆಪ್ಟೆಂಬರ್ 2022, 15:59 IST
ಅಕ್ಷರ ಗಾತ್ರ

ಹೈದರಾಬಾದ್: ಯಾದಾದ್ರಿ ಭುವನಗಿರಿ ಜಿಲ್ಲೆಯ ಯಾದಾದ್ರಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು, ಒಂದು ಕೆ.ಜಿ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕೆಸಿಆರ್ ಅವರು ತಮ್ಮ ಪತ್ನಿ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ್ದರು. ದೇವಾಲಯದ ಆಡಳಿತ ಮಂಡಳಿ ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿತು. ಕೆಸಿಆರ್ ಅವರ ಕುಟುಂಬದ ಪರವಾಗಿ, ಅವರ ಮೊಮ್ಮಗ ಹಿಮಾಂಶು ದೇವರಿಗೆ ರೇಷ್ಮೆ ವಸ್ತ್ರಗಳನ್ನು ಅರ್ಪಿಸಿದರು. ಇದೇವೇಳೆ, ದೇಗುಲಕ್ಕೆ ಒಂದು ಕೆಜಿ ಚಿನ್ನ ಖರೀದಿಗೆ ಕೆಸಿಆರ್‌ ಚೆಕ್ ನೀಡಿದರು.

ಸಚಿವರು ಮತ್ತು ಅಧಿಕಾರಿಗಳ ಜೊತೆ ಭೇಟಿ ನೀಡಿ ದೇಗುಲದ ಅಭಿವೃದ್ಧಿ ಪರಿಶೀಲನೆ ನಡೆಸಿದ ಅವರು, ದೇಗುಲದ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಯಾದಾದ್ರಿ ದೇಗುಲ ಅಭಿವೃದ್ಧಿಗೆ ₹46 ಕೋಟಿ ಬಿಡುಗಡೆಗೆ ಹಣಕಾಸು ಇಲಾಖೆಗೆ ಸೂಚಿಸಿದ ಅವರು, ಯಾದಗಿರಿಗುಡ್ಡ ದೇಗುಲ ಅಭಿವೃದ್ಧಿ ಪ್ರಾಧಿಕಾರಕ್ಕೆ 2,157 ಎಕರೆ ಭೂಮಿ ಹಸ್ತಾಂತರಕ್ಕೆ ಕಂದಾಯ ಇಲಾಖೆಗೆ ಸೂಚನೆ ನೀಡಿದರು.

ದೇವಸ್ಥಾನದ ಅಗತ್ಯತೆಗಳು, ಪೊಲೀಸ್ ಇಲಾಖೆ, ಅಗ್ನಿಶಾಮಕ ಠಾಣೆ, ಆರೋಗ್ಯ, ಸಾರಿಗೆ, ಪಾರ್ಕಿಂಗ್ ಮತ್ತು ಯಾದಾದ್ರಿ ಅಭಿವೃದ್ಧಿಗೆ ಸಂಬಂಧಿಸಿದ ಪೂರಕ ಸೇವೆಗಳಿಗೆ ಭೂಮಿಯನ್ನು ಬಳಸಿಕೊಳ್ಳುವಂತೆ ಸೂಚಿಸಿದರು.

ಅದೇ ಜಾಗದಲ್ಲಿ ಯಾದಾದ್ರಿ ದೇವಸ್ಥಾನದ ಅರ್ಚಕರು ಹಾಗೂ ಸಿಬ್ಬಂದಿಗೆ ಮನೆ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. 100 ಎಕರೆ ಪ್ರದೇಶದಲ್ಲಿ ‘ನರಸಿಂಹ ಅಭಯಾರಣ್ಯ’ (ದಟ್ಟಕಾಡು) ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಆದೇಶಿಸಿದರು. 50 ಎಕರೆ ಜಾಗದಲ್ಲಿ ‘ಅಮ್ಮನವರ’ಹೆಸರಿನಲ್ಲಿ ಭವ್ಯವಾದ ಕಲ್ಯಾಣ ಮಂಟಪ (ಮದುವೆ ಮಂಟಪ) ನಿರ್ಮಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT