ತಿರುವನಂತಪುರ(ಪಿಟಿಐ): ಕೇರಳ ಯುಡಿಎಫ್ ಶಾಸಕರು ತಮ್ಮ ವಿರುದ್ಧ ದಾಖಲಾಗಿರುವ ಜಾಮೀನು ರಹಿತ ಪ್ರಕರಣ ವಿರೋಧಿಸಿ ವಿಧಾನಸಭೆಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ್ದರಿಂದ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಸ್ಪೀಕರ್ ಎ.ಎನ್. ಶಂಷೀರ್ ಅವರು ಸದನದಲ್ಲಿ ಪಕ್ಷಪಾತದ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ, ಯುಡಿಎಫ್ ಶಾಸಕರು ಸ್ಪೀಕರ್ ಕಚೇರಿ ಮುಂದೆ ಎರಡು ದಿನಗಳ ಹಿಂದೆ ಧರಣಿ ನಡೆಸಿದ್ದರು. ಸ್ವೀಕರ್ ಕಚೇರಿ ಮುಂದೆ ಗದ್ದಲ ನಡೆಸಿ, ಮಾರ್ಷಲ್‌ಗಳ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಯುಡಿಎಫ್ ಶಾಸಕರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಶ್ನೋತ್ತರ ಅವಧಿಯಲ್ಲಿ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಶಾಸಕರ ವಿರುದ್ಧ ದಾಖಲಾಗಿರುವ ಜಾಮೀನು ರಹಿತ ಪ್ರಕರಣದ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಆದರೆ, ಇದರ ಚರ್ಚೆಗೆ ಸ್ವೀಕರ್ ಅವಕಾಶ ನೀಡಲಿಲ್ಲ. ಆಗ ವಿಪಕ್ಷಗಳ ಸದಸ್ಯರು ಪ್ರತಿಭಟನೆ ಆರಂಭಿಸಿದರು. ಸ್ಪೀಕರ್ ನಿರ್ಧಾರ ವಿರೋಧಿಸಿ ವಿಪಕ್ಷಗಳ ಶಾಸಕರು, ಸ್ಪೀಕರ್ ಪೀಠದ ಮುಂದಿನ ಆವರಣಕ್ಕೆ ಇಳಿದು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದರು. ಇದರಿಂದ ಸ್ಪೀಕರ್ ದಿನದ ಮಟ್ಟಿಗೆ ಕಲಾಪ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.