ಸೋಮವಾರ, ಏಪ್ರಿಲ್ 12, 2021
28 °C

ಲವ್ ಜಿಹಾದ್ ವಿಚಾರದಲ್ಲಿ ನಿದ್ದೆ ಮಾಡುತ್ತಿರುವ ಕೇರಳ ಸರ್ಕಾರ: ಯೋಗಿ ಆದಿತ್ಯನಾಥ

ಪಿಟಿಐ Updated:

ಅಕ್ಷರ ಗಾತ್ರ : | |

Yogi Adityanath

ಕಾಸರಗೋಡು: ಕೇರಳ ಸರ್ಕಾರವು ‘ಲವ್ ಜಿಹಾದ್’ ತಡೆಯಲು ರಚನಾತ್ಮಕ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾನುವಾರ ಟೀಕಿಸಿದ್ದಾರೆ. ಕೇರಳ ಹೈಕೋರ್ಟ್‌ 2009ರಲ್ಲೇ ‘ಲವ್ ಜಿಹಾದ್’ ವಿರುದ್ಧ ಹೇಳಿಕೆ ನೀಡಿದ್ದರೂ ಆ ಬಗ್ಗೆ ಸರ್ಕಾರ ಮಾತ್ರ ಇನ್ನೂ ಪರಿಶೀಲನೆ ನಡೆಸಿಲ್ಲ ಎಂದು ಅವರು ದೂರಿದ್ದಾರೆ.

ಕೇರಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ‘ವಿಜಯ ಯಾತ್ರೆ’ ಉದ್ಘಾಟಿಸಿ ಅವರು ಮಾತನಾಡಿದ್ದಾರೆ.

ಓದಿ: 

‘ಲವ್ ಜಿಹಾದ್ ಕೇರಳವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಪರಿವರ್ತಿಸಲಿದೆ ಎಂದು 2009ರಲ್ಲಿ ಕೇರಳ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಆದರೆ, ಕೇರಳ ಸರ್ಕಾರವು ನಿದ್ದೆ ಮಾಡುತ್ತಿದೆ. ನಮ್ಮ ಸರ್ಕಾರವು (ಉತ್ತರ ಪ್ರದೇಶ) ಲವ್ ಜಿಹಾದ್ ಮತ್ತು ಬಲವಂತದ ಮತಾಂತರ ತಡೆಗೆ ಕಾನೂನು ರೂಪಿಸಿದೆ’ ಎಂದು ಯೋಗಿ ಹೇಳಿದ್ದಾರೆ.

ಕೇರಳದಲ್ಲಿ ಕೋವಿಡ್–19 ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಬಗ್ಗೆಯೂ ಸರ್ಕಾರವನ್ನು ಯೋಗಿ ಟೀಕಿಸಿದ್ದಾರೆ.

14 ದಿನಗಳ ಕಾಲ ನಡೆಯಲಿರುವ ವಿಜಯ ಯಾತ್ರೆಯು ಕೇರಳದ ಎಲ್ಲ 14 ಜಿಲ್ಲೆಗಳನ್ನು ಹಾದುಹೋಗಲಿದೆ. ಯಾತ್ರೆಯ ಆರಂಭದೊಂದಿಗೆ ಕೇರಳದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರವು ಅಧಿಕೃತವಾಗಿ ಶುರುವಾದಂತಾಗಿದೆ.

ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು