ಮಂಗಳವಾರ, ಸೆಪ್ಟೆಂಬರ್ 28, 2021
23 °C

2 ಲಕ್ಷ ದಾಟಿದ ಮಹಿಳಾ ಸಹಾಯವಾಣಿ ಕರೆಗಳ ಸಂಖ್ಯೆ: ಪಿಣರಾಯಿ ವಿಜಯನ್

ಪಿಟಿಐ Updated:

ಅಕ್ಷರ ಗಾತ್ರ : | |

ತಿರುವನಂತಪುರಂ: ಮಹಿಳೆಯರಿಗಾಗಿ ತೆರೆಯಲಾದ 'ಮಿತ್ರ 181' ಎಂಬ ಸಹಾಯವಾಣಿ ಕೇಂದ್ರದಲ್ಲಿ ಸ್ವೀಕರಿಸಿದ ಕರೆಗಳ ಸಂಖ್ಯೆ ಎರಡು ಲಕ್ಷ ದಾಟಿದೆ. ಸಂಕಷ್ಟದಲ್ಲಿದ್ದಾಗ ಹೆಚ್ಚಿನ ಜನರು ಸೇವೆಯನ್ನು ಬಳಸಿಕೊಳ್ಳಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಹೇಳಿದ್ದಾರೆ.

ತುರ್ತು ಸಹಾಯವಾಣಿಯಲ್ಲಿ ಸ್ವೀಕರಿಸಿದ ಒಟ್ಟು ಕರೆಗಳಲ್ಲಿ, ಕರೆ ಮಾಡಿದ 90,000 ಜನರಿಗೆ ಅಗತ್ಯ ಸೇವೆ ಒದಗಿಸಲಾಗಿದೆ ಎಂದು ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. 'ಮಿತ್ರ 181' ಮಹಿಳೆಯರ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ 2017 ರಲ್ಲಿ ಆರಂಭಿಸಲಾಗಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಡಿಯಲ್ಲಿ ಸಾರ್ವಜನಿಕ ವಲಯದ ಸಂಸ್ಥೆಯಾಗಿರುವ ಕೇರಳ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು (KSWDC) 24 x 7 ತುರ್ತು ಸಹಾಯವಾಣಿ ಸೇವೆಯನ್ನು ನಡೆಸುತ್ತಿದೆ.

ಸಹಾಯವಾಣಿಯ ವೈಶಿಷ್ಟ್ಯಗಳನ್ನು ವಿವರಿಸಿದ ಮುಖ್ಯಮಂತ್ರಿ, ನಿಯಂತ್ರಣ ಕೊಠಡಿಯಲ್ಲಿರುವ ಎಲ್ಲಾ ಮಹಿಳಾ ಸಿಬ್ಬಂದಿಗಳು ಕಾನೂನು ಮತ್ತು ಸಾಮಾಜಿಕ ಕಾರ್ಯಗಳಲ್ಲಿ ವೃತ್ತಿಪರ ಅರ್ಹತೆ ಹೊಂದಿರುವವರು ಎಂದು ಹೇಳಿದ್ದಾರೆ.

ಕೌನ್ಸೆಲಿಂಗ್ ಜೊತೆಗೆ, ಅಗತ್ಯವಿರುವವರಿಗೆ ಪೊಲೀಸ್ ಸೇವೆ, ಆ್ಯಂಬುಲೆನ್ಸ್, ಆಸ್ಪತ್ರೆ ಮತ್ತು ಕಾನೂನು ನೆರವನ್ನು ವಿವಿಧ ಇಲಾಖೆಗಳ ಸಮನ್ವಯದಲ್ಲಿ ನೀಡಲಾಗುತ್ತಿದೆ. ಕರೆಮಾಡುವ ಪ್ರತಿಯೊಬ್ಬರ ಸಮಸ್ಯೆಗಳನ್ನು ಆಲಿಸುತ್ತಾರೆ ಮತ್ತು ಸರಿಯಾದ ಪರಿಹಾರವನ್ನು ಕಂಡುಕೊಳ್ಳುವವರೆಗೆ ಮತ್ತು ನ್ಯಾಯ ದೊರಕುವುದನ್ನು ಖಚಿತಪಡಿಸಿಕೊಳ್ಳುವವರೆಗೂ ನಿಗಾವಹಿಸುತ್ತಾರೆ ಎಂದು ಅವರು ಹೇಳಿದರು.

ಸಹಾಯವಾಣಿಗೆ ಬಂದ ಒಟ್ಟು ಕರೆಗಳಲ್ಲಿ, 60,000 ಕರೆಗಳೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸಲಾಗಿದೆ ಮತ್ತು ಪರಿಹಾರಗಳನ್ನು ಕಂಡುಹಿಡಿಯಲಾಗಿದೆ. ಈ ಪೈಕಿ 20,000 ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿವೆ ಎಂದು ಹೇಳಿದರು.

ಸಂಬಂಧಿತ ಅಧಿಕಾರಿಗಳು 'ಮಿತ್ರ'ದಲ್ಲಿ ಸಹಾಯ ಕೋರುವ ಮಹಿಳೆಯರು ಮತ್ತು ಮಕ್ಕಳಿಗೆ ಗರಿಷ್ಠ ಬೆಂಬಲ ನೀಡಲು ಪ್ರಯತ್ನಿಸುತ್ತಿದ್ದಾರೆ. ಟೋಲ್ ಫ್ರೀ ಸಂಖ್ಯೆ 181 ಕ್ಕೆ ಡಯಲ್ ಮಾಡುವ ಮೂಲಕ ಪ್ರಮುಖ ಆಸ್ಪತ್ರೆಗಳು, ಪೊಲೀಸ್ ಠಾಣೆಗಳು ಮತ್ತು ಆ್ಯಂಬುಲೆನ್ಸ್ ಸೇವೆ ಕೂಡ ತಕ್ಷಣವೇ ಲಭ್ಯವಿರುತ್ತದೆ ಎಂದು ಸಿಎಂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು