ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಪ್ರಮಾಣ ಪತ್ರದ ಮೇಲಿನ ಮೋದಿ ಚಿತ್ರ ಪ್ರಶ್ನಿಸಿದ್ದ ಅರ್ಜಿ ದಂಡದೊಂದಿಗೆ ವಜಾ

Last Updated 21 ಡಿಸೆಂಬರ್ 2021, 6:45 IST
ಅಕ್ಷರ ಗಾತ್ರ

ಕೊಚ್ಚಿ: ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಇರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಅಲ್ಲದೇ ಹೀಗೊಂದು ತಕರಾರು ತೆಗೆದ ಅರ್ಜಿದಾರನಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

‘ಇದು ದುರುದ್ದೇಶದಿಂದ ಸಲ್ಲಿಕೆಯಾದ ಕ್ಷುಲ್ಲಕ ಅರ್ಜಿ. ಅರ್ಜಿದಾರರಿಗೆ ರಾಜಕೀಯ ಅಜೆಂಡಾ ಕೂಡ ಇದೆ ಎಂಬ ಬಲವಾದ ಅನುಮಾನವಿದೆ. ನನ್ನ ಪ್ರಕಾರ, ಇದು ಪ್ರಚಾರ ಪಡೆಯುವ ಸಲುವಾಗಿ ಸಲ್ಲಿಸಲಾಗಿದ್ದ ಅರ್ಜಿ. ಆದ್ದರಿಂದ ಈ ಅರ್ಜಿಯು ಭಾರಿ ಮೊತ್ತದ ದಂಡದೊಂದಿಗೆ, ವಜಾಗೊಳ್ಳಲು ತಕ್ಕುದಾದ್ದು,’ ಎಂದು ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅಭಿಪ್ರಾಯಪಟ್ಟರು.

ಲಸಿಕೆ ಪ್ರಮಾಣಪತ್ರ ಎಂಬುದು ವ್ಯಕ್ತಿಯೊಬ್ಬರ ಖಾಸಗಿ ದಾಖಲೆ. ಅದರ ಮೇಲೆ ನಿರ್ದಿಷ್ಟ ವ್ಯಕ್ತಿ ಹಕ್ಕುಗಳನ್ನು ಹೊಂದಿರುತ್ತಾರೆ ಎಂದು ಅರ್ಜಿದಾರರು ಇದಕ್ಕೂ ಮೊದಲು ವಾದಿಸಿದರು.

ವ್ಯಕ್ತಿಯೊಬ್ಬರು ಹಣ ಕೊಟ್ಟು ಲಸಿಕೆ ಪಡೆದ ಮೇಲೆ ಸರ್ಕಾರವು ಪ್ರಧಾನಿಯ ಫೋಟೊವನ್ನು ಪ್ರಮಾಣ ಪತ್ರದ ಮೇಲೆ ಮುದ್ರಿಸಿ, ಹೆಗ್ಗಳಿಕೆ ಪಡೆಯುವ ಅವಕಾಶಗಳು ಇರುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ಪ್ರತಿಪಾದಿಸಿದರು.

ಈ ತಿಂಗಳ ಆರಂಭದಲ್ಲಿ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಲಸಿಕೆ ಪ್ರಮಾಣಪತ್ರಗಳಲ್ಲಿ ಮೋದಿಯವರ ಫೋಟೋ ಇರುವುದಕ್ಕೆ ಏಕೆ ನಾಚಿಕೆಪಡುತ್ತೀರಿ ಎಂದು ನ್ಯಾಯಮೂರ್ತಿಗಳು ಅರ್ಜಿದಾರರನ್ನು ಪ್ರಶ್ನಿಸಿದ್ದರು. ಅಲ್ಲದೆ, ನೀವು ನ್ಯಾಯಾಂಗದ ಸಮಯ ಹಾಳು ಮಾಡುತ್ತಿದ್ದೀರಿ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT