ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ: ಎಲ್‌ಡಿಎಫ್ ಮುನ್ನಡೆ, ಅರಳದ ಕಮಲ

ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಆಡಳಿತರೂಢ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್ ಮುನ್ನಡೆ ಕಾಯ್ದುಕೊಂಡಿದೆ.
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಎರಡನೇ ಸ್ಥಾನದಲ್ಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಎರಡು ಮುನ್ಸಿಪಲ್‌ಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
941 ಗ್ರಾಮಪಂಚಾಯ್ತಿಗಳಲ್ಲಿ ಎಲ್‌ಡಿಎಫ್ 517, ಯುಡಿಎಫ್ 374, ಎನ್‌ಡಿಎ 22, ಇತರರು 28ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
6 ಕಾರ್ಪೊರೇಶನ್‌ಗಳ ಪೈಕಿ ಎಲ್‌ಡಿಎಫ್ 4, ಯುಡಿಎಫ್ 2ರಲ್ಲಿ ಮುನ್ನಡೆಯಲ್ಲಿದ್ದು ಬಿಜೆಪಿ ನೇತೃತ್ವದ ಎನ್‌ಡಿಎ ಶೂನ್ಯ ಸಂಪಾದನೆ ಮಾಡಿದೆ. ತಿರುವನಂತರದ 100 ವಾರ್ಡ್‌ಗಳ ಪೈಕಿ ಎಲ್‌ಡಿಎಫ್ 50ರಲ್ಲಿ, ಬಿಜೆಪಿ 30ರಲ್ಲಿ ಹಾಗೂ ಯುಡಿಎಫ್ 9ರಲ್ಲಿ ಮನ್ನಡೆ ಕಾಯ್ದುಕೊಂಡಿವೆ. ಕಳೆದ ಸಲ ಬಿಜೆಪಿ 34 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಎಲ್‌ಡಿಎಫ್ ಎದುರು ಬಿಜೆಪಿ ಮತ್ತೆ ಸೋಲು ಕಂಡಿದೆ.
86 ಮುನ್ಸಿಪಲ್‌ಗಳಲ್ಲಿ ಎಲ್‌ಡಿಎಫ್ 45, ಯುಡಿಎಫ್ 35, ಇತರರು 4 ಹಾಗೂ ಬಿಜೆಪಿ 2ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
14 ಜಿಲ್ಲಾ ಪಂಚಾಯ್ತಿಗಳಲ್ಲಿ ಎಲ್‌ಡಿಎಫ್ 10, ಯುಡಿಎಫ್ 4 ರಲ್ಲಿ ಮುನ್ನಡೆಯಲಿದ್ದು ಬಿಜೆಪಿ ಶೂನ್ಯ ಸಾಧನೆ ಮಾಡಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.