ಸೋಮವಾರ, ನವೆಂಬರ್ 30, 2020
19 °C

ಕೇರಳ | ವಿಪತ್ತು ನಿರ್ವಹಣಾ ತಂಡಗಳಲ್ಲಿ ತೃತೀಯಲಿಂಗಿಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕೇರಳದ ವಿಪತ್ತು ನಿರ್ವಹಣೆಯಲ್ಲಿ ಇನ್ನು ಮುಂದೆ ತೃತೀಯಲಿಂಗಿಗಳು ಪ್ರಮುಖ ಪಾತ್ರ ವಹಿಸಲಿದ್ದು, ವಿಪತ್ತು ನಿರ್ವಹಣಾ ತಂಡಗಳಲ್ಲಿ ಇವರನ್ನು ಸೇರ್ಪಡೆಗೊಳಿಸಲು ಸರ್ಕಾರ ನಿರ್ಧರಿಸಿದೆ. 

ತುರ್ತು ಸಂದರ್ಭದಲ್ಲಿ ಈ ಸಮುದಾಯದವರ ಸೇವೆಯನ್ನು ಬಳಸಿಕೊಳ್ಳಲು ರೂಪುರೇಷೆ ಸಿದ್ಧಪಡಿಸಲಾಗಿದ್ದು ಈ ಮೂಲಕ ರಾಜ್ಯದ ತುರ್ತುಸೇವೆಯನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ನೈಸರ್ಗಿಕ ವಿಕೋಪಗಳು ಹೆಚ್ಚಾಗುತ್ತಿದ್ದು, 2018 ಹಾಗೂ 2019ರಲ್ಲಿ ನೆರೆಯಿಂದ ಹೆಚ್ಚಿನ ಹಾನಿ ಉಂಟಾಗಿತ್ತು. ಈ ಕಾರಣದಿಂದಾಗಿ ದುರ್ಬಲ ವರ್ಗದವರೂ ಸೇರಿದಂತೆ ಸಮಾಜದ ಎಲ್ಲರನ್ನೂ ಒಳಗೊಂಡ ವಿಪತ್ತು ನಿರ್ವಹಣಾ ಮಾದರಿಯನ್ನು ರಚಿಸಲು ಕೇರಳ ಮುಂದಾಗಿದೆ. ದೇಶದಲ್ಲೇ ಮೊದಲ ಬಾರಿಗೆ ತೃತೀಯಲಿಂಗಿಗಳನ್ನು ಒಳಗೊಂಡ ವಿಪತ್ತು ನಿರ್ವಹಣಾ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್‌ಡಿಎಂಎ) ನಿರ್ಧರಿಸಿದೆ ಎಂದು ರಾಜ್ಯ ಯೋಜನಾ ಅಧಿಕಾರಿ ಜಾಯ್‌ ಜಾನ್‌ ಜಾರ್ಜ್‌ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು