ಬುಧವಾರ, ಮಾರ್ಚ್ 3, 2021
18 °C

ಸರ್ಕಾರದ ಎಲ್ಲ ಇಲಾಖೆಗಳ ಅರ್ಜಿಗಳಲ್ಲಿ ‘ಲೈಂಗಿಕ ಅಲ್ಪಸಂಖ್ಯಾತ’ ಆಯ್ಕೆ: ಕೇರಳ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ತಿರುವನಂತಪುರಂ: ಸದ್ಯ ವಿವಿಧ ಉದ್ದೇಶಗಳಿಗಾಗಿ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಬಳಸಲಾಗುತ್ತಿರುವ ಅರ್ಜಿಗಳ ನಮೂನೆಗಳನ್ನು ಪರಿಷ್ಕರಿಸಿ, ಲಿಂಗ ಸೂಚಕ ಆಯ್ಕೆಯಲ್ಲಿ ‘ಲೈಂಗಿಕ ಅಲ್ಪಸಂಖ್ಯಾತ’ ಸೇರಿಸಲು ಕೇರಳ ಸರ್ಕಾರ ನಿರ್ಧರಿಸಿದೆ. ಈ ಕುರಿತು ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸಚಿವೆ ಕೆ.ಕೆ.ಶೈಲಜಾ ಸೋಮವಾರ ಪ್ರಕಟಿಸಿದ್ದಾರೆ.

‘ಇದು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ಸಿಕ್ಕ ಮತ್ತೊಂದು ಮನ್ನಣೆಯಾಗಿದೆ. ಇದರಿಂದ ಈ ಸಮುದಾಯದ ಏಳಿಗೆಗೆ ನೆರವಾಗಲಿದೆ’ ಎಂದು ಶೈಲಜಾ ಅಭಿಪ್ರಾಯಪಟ್ಟಿದ್ದಾರೆ. ಕೊನೇ ಸ್ಥರದಲ್ಲಿರುವ ಸಮುದಾಯವನ್ನೂ ತಲುಪುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆಯೆಂದೂ ಅವರು ತಿಳಿಸಿದ್ದಾರೆ.

ಕೇರಳದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ನೀತಿ ಜಾರಿಯಲ್ಲಿದ್ದು, ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆಗೆ ಸರ್ಕಾರ ಹಣಕಾಸಿನ ನೆರವು ನೀಡುತ್ತದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದೆ ಸರ್ಕಾರದ ಎಲ್ಲ ಅರ್ಜಿಗಳಲ್ಲಿ ಮಹಿಳೆ / ಪುರುಷ / ಲೈಂಗಿಕ ಅಲ್ಪಸಂಖ್ಯಾತ / ಟ್ರಾನ್ಸ್‌ವುಮೆನ್ / ಟ್ರಾನ್ಸ್‌ಮೆನ್‌ ಆಯ್ಕೆ ನೀಡಲಾಗುವುದು.

ಕೇರಳ, 2014ರಲ್ಲಿ ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದ ಬಳಿಕ ಲೈಂಗಿಕ ಅಲ್ಪಸಂಖ್ಯಾತರ ನೀತಿ ಘೋಷಿಸಿದ ಮೊದಲ ರಾಜ್ಯ ಎನಿಸಿಕೊಂಡಿದೆ. ಈ ನೀತಿಯು ಈ ಸಮುದಾಯದವರಿಗೆ ಸಮಾನತೆ ಮತ್ತು ಸಮಾನ ರಕ್ಷಣೆಯ ಹಕ್ಕನ್ನು ಖಾತ್ರಿಪಡಿಸುತ್ತದೆ.

ಇತ್ತೀಚೆಗೆ ಇಲ್ಲಿನ ಮಹಿಳಾಭಿವೃದ್ಧಿ ನಿಗಮವು ಸ್ವ–ಉದ್ಯೋಗ ಆರಂಭಿಸುವ ಲೈಂಗಿಕ ಅಲ್ಪಸಂಖ್ಯಾತರಿಗಾಗಿ ರೂ.3ರಿಂದ 15 ಲಕ್ಷದ ವರೆಗೆ ಸಾಲ ಸೌಲಭ್ಯ ನೀಡುವುದಾಗಿ ಘೋಷಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು