ಸೋಮವಾರ, ಏಪ್ರಿಲ್ 12, 2021
31 °C

ನಕ್ಸಲರು ಅಪಹರಿಸಿದ್ದ ಯೋಧ ರಾಕೇಶ್ವರ ಸಿಂಗ್‌ ಮನ್ಹಾಸ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜಾಪುರ: ನಕ್ಸಲರು ಅಪಹರಿಸಿದ್ದ ಯೋಧ ರಾಕೇಶ್ವರ ಸಿಂಗ್‌ ಮನ್ಹಾಸ್‌ ಅವರನ್ನು ಗುರುವಾರ ಸಂಜೆ ಬಿಡುಗಡೆ ಮಾಡಲಾಗಿದೆ.

ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಕೋಬ್ರಾ ಕಮಾಂಡೊ ಪಡೆಯ ರಾಕೇಶ್ವರ್ ಸಿಂಗ್‌ ಅವರನ್ನು ಏಪ್ರಿಲ್‌ 3ರಂದು ಛತ್ತೀಸಗಡದ ಬಸ್ತಾರ್‌ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿ ಸಂದರ್ಭದಲ್ಲಿ ಅಪಹರಿಸಲಾಗಿತ್ತು. ಗುಂಡಿನ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದರು.

ಗುಡಿಸಲಲ್ಲಿ ಮನ್ಹಾಸ್‌ ಕುಳಿತಿರುವ ಚಿತ್ರವನ್ನು ಗುರುವಾರ (ಏ.8) ಬೆಳಗ್ಗೆ ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದಲ್ಲಿ ಮನ್ಹಾಸ್‌ ಮಾತ್ರ ಇದ್ದು, ನಕ್ಸಲರು ಯಾರೂ ಕಾಣಿಸಿಕೊಂಡಿರಲಿಲ್ಲ.

ಸಿಂಗ್‌ ಅವರನ್ನು ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಇಲ್ಲಿನ ದಟ್ಟ ಅರಣ್ಯದಲ್ಲಿ ಬಿಡುಗಡೆ ಮಾಡಲಾಗಿದೆ. ಬಳಿಕ ಅವರು ಸ್ಥಳೀಯ ಟೆರ್ರಂ ಪೊಲೀಸ್ ಠಾಣೆಗೆ ಸುರಕ್ಷಿತವಾಗಿ ಬಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ರಾಕೇಶ್ವರ್ ಅವರ ಆರೋಗ್ಯ ತಪಾಸಣೆ ಮಾಡಿದ ಬಳಿಕ ಸಿಆರ್‌ಪಿಎಫ್ ಕ್ಯಾಂಪಿಗೆ ಕರೆದೊಯ್ದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು