ಗುರುವಾರ , ಆಗಸ್ಟ್ 18, 2022
25 °C

ಅಟಾರ್ನಿ ಜನರಲ್‌ ಆಗಿ ಮುಂದುವರಿಯಲು ವೇಣುಗೋಪಾಲ್‌ ಒಪ್ಪಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

PV Photo

ನವದೆಹಲಿ: ವಕೀಲ ಕೆ.ಕೆ.ವೇಣುಗೋಪಾಲ್‌ ಅವರು ಮತ್ತೆ ಮೂರು ತಿಂಗಳು ಭಾರತದ ಅಟಾರ್ನಿ ಜನರಲ್‌ ಆಗಿ ಕಾರ್ಯನಿರ್ವಹಿಸಲು ಒಪ್ಪಿದ್ದಾರೆ.

‘ವೇಣುಗೋಪಾಲ್‌ ಅವರ ಅಧಿಕಾರಾವಧಿ ಇದೇ 30ರಂದು ಕೊನೆಗೊಳ್ಳಲಿದೆ. ವೈಯಕ್ತಿಕ ಕಾರಣಗಳಿಂದಾಗಿ ಅವರು ಈ ಹುದ್ದೆಯಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದರು. ಕೇಂದ್ರ ಸರ್ಕಾರ ಮನವಿ ಮಾಡಿದ್ದರಿಂದ ನಿರ್ಧಾರ ಬದಲಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ. 

2017ರ ಜುಲೈನಲ್ಲಿ ಅಟಾರ್ನಿ ಜನರಲ್‌ ಆಗಿ ವೇಣುಗೋಪಾಲ್‌ ನೇಮಕಗೊಂಡಿದ್ದರು. ಅವರ ಅವಧಿ 2020ರಲ್ಲಿ ಕೊನೆಗೊಂಡಿತ್ತು. ಅವರ ಮನವಿ ಮೇರೆಗೆ ಕೇಂದ್ರ ಸರ್ಕಾರವು ಒಂದು ವರ್ಷದ ಅವಧಿಗೆ ಅವರನ್ನು ಹುದ್ದೆಯಲ್ಲಿ ಮುಂದುವರಿಸಿತ್ತು. ಬಳಿಕ ಮತ್ತೊಂದು ವರ್ಷದ ಅವಧಿಗೆ ಅವರು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು