ಬುಧವಾರ, ಸೆಪ್ಟೆಂಬರ್ 30, 2020
19 °C

ಮುಂಬೈ ತಲುಪಿದ ಪೈಲಟ್‌ ಸಾಠೆ ಮೃತದೇಹ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕೋಯಿಕ್ಕೋಡ್‌ನಲ್ಲಿ ನಡೆದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಅಪಘಾತದಲ್ಲಿ ಮೃತಪ‍ಟ್ಟ ಪೈಲಟ್‌ ಕ್ಯಾಪ್ಟನ್‌ ದೀಪಕ್‌ ಸಾಠೆ ಅವರ ಪಾರ್ಥಿವ ಶರೀರ ಭಾನುವಾರ ಮಧ್ಯಾಹ್ನ ವಿಮಾನದ ಮುಖಾಂತರ ಇಲ್ಲಿಗೆ ತಲುಪಿದೆ. 

ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಬಳಿ ಇರುವ ಏರ್‌ ಇಂಡಿಯಾ ಕಚೇರಿಯಲ್ಲಿ ಕೆಲ ಕಾಲ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಸಾಠೆ ಅವರ ಪತ್ನಿ ಸುಶ್ಮಾ ಹಾಗೂ ಮಗ ಸ್ಥಳದಲ್ಲಿ ಇದ್ದರು. ಪೈಲಟ್‌ಗಳು ಹಾಗೂ ಏರ್‌ ಇಂಡಿಯಾ ಸಿಬ್ಬಂದಿ ಸಾಠೆ ಅವರ ಮೃತದೇಹಕ್ಕೆ ಪುಷ್ಪ ಸಮರ್ಪಣೆ ಮಾಡುವ ಮುಖಾಂತರ ಕಂಬನಿ ಮಿಡಿದರು.  ‌ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು