ಮಂಗಳವಾರ, ಸೆಪ್ಟೆಂಬರ್ 28, 2021
24 °C

ನಿಯಮದ ಪ್ರಕಾರ ಈಶ್ವರಪ್ಪರನ್ನು ಅನರ್ಹಗೊಳಿಸಬೇಕು! ಕಾಂಗ್ರೆಸ್‌ ಪ್ರತಿಪಾದನೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿಯಮಗಳ ಪ್ರಕಾರ ಸಚಿವ ಕೆ.ಎಸ್‌ ಈಶ್ವರಪ್ಪ ಅವರನ್ನು ಜನಪ್ರತಿನಿಧಿಯ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕಾಂಗ್ರೆಸ್‌ ಅಭಿಪ್ರಾಯಪಟ್ಟಿದೆ.

ಈ ಕುರಿತು ತನ್ನ ಅಧಿಕೃತ ಟ್ವೀಟರ್‌ ಖಾತೆಯಿಂದ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಮಾನಸಿಕ ಅನಾರೋಗ್ಯ ಹೊಂದಿದವರು ಚುನಾಯಿತ ಪ್ರತಿನಿಧಿಗಳ ಸ್ಥಾನದಲ್ಲಿರಲು ಅನರ್ಹರು ಎಂಬ ನಿಯಮವಿದೆ. ಬಿಜೆಪಿಯಲ್ಲಿ ಮೂಲೆಗುಂಪಾಗಿರುವ ಕಾರಣ ಕೆ.ಎಸ್‌ ಈಶ್ವರಪ್ಪ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಂತಿದೆ. ನಿಯಮದ ಪ್ರಕಾರ ಅವರನ್ನು ಜನಪ್ರತಿನಿಧಿಯ ಸ್ಥಾನದಿಂದ ಅನರ್ಹಗೊಳಿಸಬೇಕು,‘ ಎಂದು ವ್ಯಂಗ್ಯವಾಡಿದೆ.

ಕನ್ನಡಿಗರ ಸಭ್ಯತನಕ್ಕೆ ಈಶ್ವರಪ್ಪನವರು ಅತೀ ದೊಡ್ಡ ಕಳಂಕ ಎಂದೂ ಕಾಂಗ್ರೆಸ್‌ ಮೂದಲಿಸಿದೆ.

ಬಿಜೆಪಿ ಕಾರ್ಯಕರ್ತರು ಒಂದು ಏಟಿನ ಬದಲಿಗೆ ಎರಡು ಏಟು ಕೊಡಬೇಕು ಎಂದು ಹೇಳಿದ್ದ ಕೆ.ಎಸ್‌ ಈಶ್ವರಪ್ಪ ಅವರು, ತಮ್ಮ ಮಾತನ್ನು ಸಮರ್ಥನೆ ಕೂಡ ಮಾಡಿಕೊಂಡಿದ್ದರು. ಇದೇ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರ ವಿರುದ್ಧ ಕಿಡಿ ಕಾರಿದ್ದ ಕಾಂಗ್ರೆಸ್‌ ನಾಯಕ ಬಿ.ಕೆ ಹರಿಪ್ರಸಾದ್‌, ‘ಈಶ್ವರಪ್ಪ ತಮ್ಮ ಹೆಸರನ್ನು ‘ಮೇರಾ ನಾಮ್ ಜೋಕರ್’ ಎಂದು ಬದಲಾಯಿಸಿಕೊಳ್ಳಲಿ’ ಎಂದು ಗೇಲಿ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಈಶ್ವರಪ್ಪ, ಕಾಂಗ್ರೆಸ್ಸಿಗರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ನಿಂದಿಸಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಈಶ್ವರಪ್ಪ ಅವರನ್ನು ಟೀಕಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು