ಗುರುವಾರ , ಅಕ್ಟೋಬರ್ 29, 2020
19 °C

ಭಾರತೀಯ ಪತ್ರಿಕಾ ಸಂಘದ ಅಧ್ಯಕ್ಷರಾಗಿ ಆದಿಮೂಲಂ ಆಯ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತೀಯ ಪತ್ರಿಕಾ ಸಂಘದ (ಐಎನ್‌ಎಸ್‌) 2020–21ನೇ ಸಾಲಿನ ನೂತನ ಅಧ್ಯಕ್ಷರನ್ನಾಗಿ ಎಲ್‌.ಆದಿಮೂಲಂ ಅವರನ್ನು ಆಯ್ಕೆ ಮಾಡಲಾಗಿದೆ.

ಆದಿಮೂಲಂ ಅವರು ‘ಹೆಲ್ತ್‌ ಆ್ಯಂಡ್‌ ಆ್ಯಂಟಿಸೆಪ್ಟಿಕ್‌’ ನಿಯತಕಾಲಿಕೆಯನ್ನು ಮುನ್ನಡೆಸುತ್ತಿದ್ದಾರೆ. ಆದಿಮೂಲಂ ಅವರು ಐಎನ್‌ಎಸ್‌ನ ಮಾಜಿ ಅಧ್ಯಕ್ಷ ಹಾಗೂ ತಮಿಳು ದೈನಿಕ ‘ದಿನಮಲರ್’‌ ಮಾಲೀಕರಾದ ಡಾ.ಆರ್‌.ಲಕ್ಷ್ಮೀಪತಿ ಅವರ ಪುತ್ರ.

ಬೆಂಗಳೂರಿನಲ್ಲಿ ನಡೆದ ಸಂಘದ 81ನೇ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಡೆಪ್ಯುಟಿ ವೈಸ್‌ಪ್ರೆಸಿಡೆಂಟ್‌ ಆಗಿ ಡಿ.ಡಿ.ಪುರಕಾಯಸ್ಥ (ಆನಂದ್ ಬಜಾರ್‌ ಪತ್ರಿಕಾ), ವೈಸ್‌ ‍ ಪ್ರೆಸಿಡೆಂಟ್‌ ಆಗಿ ಮೋಹಿತ್‌ ಜೈನ್‌ (ಎಕನಾಮಿಕ್ಸ್‌ ಟೈಮ್ಸ್‌), ಗೌರವ ಕೋಶಾಧ್ಯಕ್ಷರಾಗಿ ರಾಕೇಶ್‌ ಶರ್ಮಾ (ಆಜ್‌ ಸಮಾಜ್‌) ಅವರು ಆಯ್ಕೆಯಾಗಿದ್ದಾರೆ. ಮೇರಿ ಪೌಲ್‌ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಎಂದು ಐಎನ್‌ಎಸ್‌ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು