ನವದೆಹಲಿ:ಭಾರತದಲ್ಲಿವಾಸಿಸುವಹಾಗೂ ದುಡಿಯುವ ಎಲ್ಲರೂ ಈದೇಶದ ಕಾನೂನುಗಳನ್ನು ಪಾಲಿಸಬೇಕಾಗುತ್ತದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ನೂತನ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಜೊತೆಗೆ ಪಕ್ಷದ ಕಚೇರಿಯಲ್ಲಿ ನಡೆದ ಸಭೆ ಬಳಿಕಪತ್ರಕರ್ತರೊಂದಿಗೆ ವೈಷ್ಣವ್ ಮಾತನಾಡಿದ್ದಾರೆ.

ಐಟಿ ನಿಯಮಗಳಿಗೆ ಟ್ವಿಟರ್ ಬದ್ಧವಾಗಿಲ್ಲ ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತದಲ್ಲಿ ವಾಸಿಸುವ ಹಾಗೂ ದುಡಿಯುವ ಎಲ್ಲರೂ ಈ ದೇಶದ ಕಾನೂನುಗಳನ್ನು ಪಾಲಿಸಬೇಕಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ:ಹೊಸ ಐಟಿ ನಿಯಮಗಳನ್ನು ಪಾಲಿಸುವಲ್ಲಿ ಟ್ವಿಟರ್ ವಿಫಲವಾಗಿದೆ: ಕೇಂದ್ರ

ಸಚಿವ ಸ್ಥಾನದ ಜವಾಬ್ದಾರಿ ನೀಡಿರುವುದಕ್ಕೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳಿದ ಅವರು, ಸಮಾಜದ ಕಟ್ಟಕಡೇ ವ್ಯಕ್ತಿಯ ಜೀವನಮಟ್ಟವನ್ನು ಉತ್ತಮಗೊಳಿಸುವುದರತ್ತ ಗಮನಹರಿಸುವುದಾಗಿಯೂ ಭರವಸೆ ನೀಡಿದ್ದಾರೆ.

ಒಡಿಶಾದಿಂದ ಸಂಸದರಾಗಿ ಆಯ್ಕೆಯಾಗಿರುವ ವೈಷ್ಣವ್ ಬುಧವಾರ ಕೇಂದ್ರ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ಐಟಿ ಖಾತೆ ಜೊತೆಗೆ ಅವರಿಗೆ ರೈಲ್ವೆ ಇಲಾಖೆಯ ಜವಾಬ್ದಾರಿಯನ್ನೂ ವಹಿಸಲಾಗಿದೆ.

ಕುಂದುಕೊರತೆ ಅಧಿಕಾರಿ, ಮುಖ್ಯ ಅನುಸರಣೆ ಅಧಿಕಾರಿಮತ್ತುನೋಡಲ್ ಅಧಿಕಾರಿಯ ಕಡ್ಡಾಯ ನೇಮಕಕ್ಕೆ ಆದೇಶಿಸುವ ದೇಶದ ಹೊಸ ಐಟಿ ನಿಯಮಗಳನ್ನು ಪಾಲಿಸುವಲ್ಲಿ ಅಮೆರಿಕ ಮೂಲದ ಟ್ವಿಟರ್ ವಿಫಲವಾಗಿದೆ. ಈನಿಯಮಗಳು ಮೇ26 ರಿಂದಲೇ ಜಾರಿಯಾಗಿದ್ದರೂಹಾಗೂಪದೇಪದೆ ಸುತ್ತೋಲೆ ಹೊರಡಿಸಿದರೂ ನಿಯಮಗಳನ್ನು ಪಾಲಿಸದೆ ಕೇಂದ್ರ ಸರ್ಕಾರದೊಂದಿಗೆ ಜಟಾಪಟಿ ಮುಂದುವರಿಸಿದೆ.

ಇದನ್ನೂ ಓದಿ:ಕೇಂದ್ರ ಸಂಪುಟ ಪುನರ್ರಚನೆ: ಯಾರಿಗೆ ಯಾವ ಖಾತೆ? ಇಲ್ಲಿದೆ ವಿವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.