ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಧಮ್‌ಪುರ್ ಕೋರ್ಟ್ ಸ್ಫೋಟ ಪ್ರಕರಣ: ಎಲ್‌ಇಟಿ ಉಗ್ರನ ಬಂಧನ

Last Updated 4 ಜೂನ್ 2022, 15:48 IST
ಅಕ್ಷರ ಗಾತ್ರ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ್ ಪಟ್ಟಣದ ನ್ಯಾಯಾಲಯದ ಸಂಕೀರ್ಣದ ಹೊರಗಡೆ ಸಂಭವಿಸಿದ್ದ ಸ್ಫೋಟ ಪ್ರಕರಣದಲ್ಲಿ ನಂಟು ಹೊಂದಿರುವ ಲಷ್ಕರ್–ಎ–ತಯಬಾ ಉಗ್ರ ಹಾಗೂ ಆತನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಅನೇಕ ಶಂಕಿತರನ್ನು ತನಿಖೆಗೆ ಒಳಪಡಿಸಲಾಗಿತ್ತು. ರಂಬಾನ್ ಜಿಲ್ಲೆಯ ಹಲ್ಲಾ ಬೊಹಾರ್ ಧಾರ್ ನಿವಾಸಿ ಮೊಹಮ್ಮದ್ ರಂಜಾನ್ ಸೊಹೈಲ್‌ನನ್ನು ಬಂಧಿಸಲಾಗಿದೆ ಎಂದು ಎಡಿಜಿಪಿ ಮುಕೇಶ್ ಸಿಂಗ್ ತಿಳಿಸಿದ್ದಾರೆ.

ದೋಡಾದ ಖುರ್ಷಿದ್ ಅಹ್ಮದ್ ಹಾಗೂ ಭದೇರ್‌ವಾಹ್‌ನ ನಿಸಾರ್ ಅಹ್ಮದ್ ಇನ್ನಿಬ್ಬರು ಬಂಧಿತರು.

ನ್ಯಾಯಾಲಯದ ಆವರಣದಲ್ಲಿ ಐಇಡಿ ಇಟ್ಟಿರುವ ಬಗ್ಗೆ ಸೊಹೈಲ್‌ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಮೊಹಮ್ಮದ್ ಅಮಿನ್ ಅಲಿಯಾಸ್ ಖುಬೈಬ್‌ ಸೂಚನೆಯಂತೆ ಸ್ಫೋಟಕ ಇಟ್ಟಿರುವುದಾಗಿ ಆತ ಹೇಳಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ ಉಧಮ್‌ಪುರ್ ಪಟ್ಟಣದ ನ್ಯಾಯಾಲಯದ ಸಂಕೀರ್ಣದ ಹೊರಗಡೆ ಐಇಡಿ ಸ್ಫೋಟ ಸಂಭವಿಸಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರು. 14 ಮಂದಿ ಗಾಯಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT