ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧಭೂಮಿಯಿಂದ ತನ್ನ ಮುದ್ದಿನ ನಾಯಿಯನ್ನು ಕರೆತಂದ ಕೇರಳ ಯುವತಿ

Last Updated 1 ಮಾರ್ಚ್ 2022, 13:25 IST
ಅಕ್ಷರ ಗಾತ್ರ

ತಿರುವನಂತಪುರ: ಯುದ್ಧಪೀಡಿತ ಉಕ್ರೇನ್‌ನ ರಾಜಧಾನಿ ಕೀವ್‌ನಿಂದ ರೊಮೇನಿಯಾಕ್ಕೆ ಬಸ್‌ನಲ್ಲಿ ಬಂದಿರುವ ಕೇರಳ ಇಡುಕ್ಕಿ ಜಿಲ್ಲೆಯ ವಿದ್ಯಾರ್ಥಿನಿ ಆರ್ಯ ಆಲ್ಡ್ರಿನ್‌, ತನ್ನ ಸಾಕು ನಾಯಿ ಸೈರಾವನ್ನೂ ಜತೆಗೆ ಕರೆ ತಂದು ಸುದ್ದಿಯಾಗಿದ್ದಾರೆ.

ಯುದ್ಧದ ಪರಿಸ್ಥಿತಿ ಮುದ್ದಿನ ನಾಯಿಗೆ ಅಪಾಯ ತರಬಹುದು ಎಂದು ಭಾವಿಸಿದ ಅವರು, ಐದು ತಿಂಗಳ ಸೈಬೀರಿಯನ್‌ ಹಸ್ಕ್‌ ನಾಯಿಯನ್ನು ಬಸ್‌ನಲ್ಲಿ ರೊಮೇನಿಯಾ ತಲುಪಿಸಿದ್ದಾರೆ. ಈ ಚಿತ್ರ ಭಾರಿ ಪ್ರಶಂಸೆಗೆ ಪಾತ್ರವಾಗಿದೆ.

‘ಆರ್ಯ, ನಾಯಿಯನ್ನು ಹಿಡಿದುಕೊಂಡು 600 ಕಿ.ಮಿ. ಬಸ್‌ನಲ್ಲಿ ಹಾಗೂ 30 ಕಿ..ಮಿ. ಕಾಲ್ನಡಿಗೆಯಲ್ಲಿ ಸಾಗಿ ಬಂದಿದ್ದಾರೆ. ಅದಕ್ಕೆ ಪಾಸ್‌ಪೋರ್ಟ್‌ ಕೂಡ ಮಾಡಿಸಿದ್ದಾರೆ. ಅದನ್ನು ಭಾರತಕ್ಕೆ ತರುತ್ತಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಈಗ ಅವರು ವಿಮಾನ ನಿಲ್ದಾಣ ತಲುಪಿ ವಿಮಾನಕ್ಕಾಗಿ ಕಾಯುತ್ತಿದ್ದಾರೆ. ರಾಯಭಾರ ಕಚೇರಿ ಮತ್ತು ನಿಲ್ದಾಣದ ಅಧಿಕಾರಿಗಳು ಕರುಣೆ ತೋರಿಸಿ ನಾಯಿಯನ್ನು ಕರೆದ್ಯೊಯಲು ಅವಕಾಶ ನೀಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕು’ ಎಂದು ಆರ್ಯ ಕುಟುಂಬದ ಆಪ್ತರೊಬ್ಬರು ಹೇಳಿದರು.

ಆರ್ಯಳ ಸಾಮಾಜಿಕ ಜಾಲತಾಣದ ಪೋಸ್ಟ್‌ ಗಮನಿಸಿ ಇನ್ನಷ್ಟು ಭಾರತೀಯರು ತಮ್ಮ ಸಾಕು ಪ್ರಾಣಿಗಳನ್ನು ಕರೆತರುವ ಯೋಚನೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT