ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಹುಲಿಯೊಂದಿಗೆ ಹೋರಾಡಿ ಮಗು ರಕ್ಷಿಸಿದ ತಾಯಿ

Last Updated 5 ಸೆಪ್ಟೆಂಬರ್ 2022, 13:46 IST
ಅಕ್ಷರ ಗಾತ್ರ

ಉಮಾರಿಯಾ (ಮಧ್ಯಪ್ರದೇಶ): 25 ವರ್ಷದ ಮಹಿಳೆಯೊಬ್ಬರು ಪ್ರಾಣವನ್ನೂ ಲೆಕ್ಕಿಸದೆ ಹುಲಿಯೊಂದಿಗೆ ಹೋರಾಡಿ ತಮ್ಮ 15 ತಿಂಗಳ ಮಗುವನ್ನು ರಕ್ಷಿಸಿದ ಘಟನೆ ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ರೊಹಾನಿಯಾದಲ್ಲಿ ಭಾನುವಾರ ನಡೆದಿದೆ.

ವ್ಯಾಘ್ರನೊಂದಿಗೆ ಹೋರಾಡಿದ ಧೀರ ಮಹಿಳೆಯನ್ನು ಅರ್ಚನಾ ಚೌಧರಿ ಎಂದು ಗುರುತಿಸಲಾಗಿದೆ. ಸದ್ಯ ಗಾಯಗೊಂಡ ತಾಯಿ ಮತ್ತು ಮಗು ಇಬ್ಬರನ್ನೂ ಉಮಾರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ:ಅರ್ಚನಾ ಚೌಧರಿ ತಮ್ಮ ಮಗ ರವಿರಾಜ್‌ನನ್ನು ಮೂತ್ರ ವಿಸರ್ಜನೆಗೆಂದು ಹೊರಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಹುಲಿ ಮಗು ಮೇಲೆ ದಾಳಿ ಮಾಡಿತ್ತು. ಮಗು ರಕ್ಷಣೆಗೆ ಮುಂದಾದ ಅರ್ಚನಾ ಅವರ ಮೇಲೂ ಹುಲಿ ಎರಗಿತ್ತು. ಅರ್ಚನಾ ಹುಲಿಯೊಂದಿಗೆ ಹೋರಾಡುತ್ತಲೇ ಗ್ರಾಮಸ್ಥರನ್ನು ಕೂಗಿ ಕರೆದರು. ಸ್ಥಳಕ್ಕೆ ಗ್ರಾಮಸ್ಥರು ದೌಡಾಯಿಸುತ್ತಿದ್ದಂತೆಯೇ ವ್ಯಾಘ್ರ ಮಗುವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದೆ.

ಸದ್ಯ ಹುಲಿ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ವಾಸಿಸುವ ಜನರ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT