ಶುಕ್ರವಾರ, ಮೇ 20, 2022
26 °C

ಮದ್ಯದ ದರದಲ್ಲಿ ಭಾರೀ ಇಳಿಕೆ, ಮನೆಯಲ್ಲೇ ಬಾರ್‌ಗೆ ಅನುಮತಿ ಕೊಟ್ಟ ಮಧ್ಯ ಪ್ರದೇಶ

ಪಿಟಿಐ Updated:

ಅಕ್ಷರ ಗಾತ್ರ : | |

Representative Image. Credit: iStock Photo

ಭೋಪಾಲ್: ನೂತನ ಅಬಕಾರಿ ನೀತಿ 2022–23ಕ್ಕೆ ಅನುಮೋದನೆ ನೀಡಿರುವ ಮಧ್ಯ ಪ್ರದೇಶ ಸರ್ಕಾರ, ಮದ್ಯದ ದರದಲ್ಲಿ ಇಳಿಕೆ ಮಾಡಲು ನಿರ್ಧರಿಸಿದೆ.

ಮಂಗಳವಾರ ನಡೆದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಮದ್ಯ ದರದಲ್ಲಿ ಶೇ 20ರವರೆಗೆ ಇಳಿಕೆ ಮಾಡಲಿದೆ.

ಎಲ್ಲ ವಿಮಾನ ನಿಲ್ದಾಣಗಳಲ್ಲಿ ಮದ್ಯ ಮಾರಾಟ ಮಳಿಗೆ ಮತ್ತು ನಾಲ್ಕು ದೊಡ್ಡ ನಗರಗಳ ಆಯ್ದ ಸೂಪರ್‌ ಮಾರ್ಕೆಟ್‌ಗಳಲ್ಲಿ ಮದ್ಯ ಮಳಿಗೆ ತೆರೆಯಲು ಅನುಮತಿಯ ಜತೆಗೆ ಮನೆಯಲ್ಲಿಯೇ ಮಿನಿ ಬಾರ್ ಹೊಂದಲು ಅಲ್ಲಿನ ಸರ್ಕಾರ ಅವಕಾಶ ಕಲ್ಪಿಸಿದೆ.

ವಾರ್ಷಿಕ ₹1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು, ವರ್ಷಕ್ಕೆ ₹50,000 ಶುಲ್ಕ ಪಾವತಿಸಿ ಮನೆಯಲ್ಲಿಯೇ ಬಾರ್ ಹೊಂದಲು ಲೈಸನ್ಸ್ ದೊರೆಯಲಿದೆ.

ಇಂದೋರ್, ಭೋಪಾಲ್, ಜಬಲ್ಪುರ್ ಮತ್ತು ಗ್ವಾಲಿಯರ್‌ನ ಕೆಲವು ಸೂಪರ್‌ ಮಾರ್ಕೆಟ್‌ಗಳಲ್ಲಿಯೂ ಮದ್ಯ ಮಾರಾಟ ತೆರೆಯಲು ಸರ್ಕಾರ ಅನುಮತಿ ನೀಡಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು