ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಹತ್‌ ಮೊತ್ತ ಬಾಕಿ: ಸ್ಪೈಸ್‌ಜೆಟ್‌ ಜಪ್ತಿಗೆ ಮದ್ರಾಸ್‌ ಹೈಕೋರ್ಟ್‌ ಆದೇಶ

Last Updated 7 ಡಿಸೆಂಬರ್ 2021, 14:50 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಭಾರಿ ಮೊತ್ತ ಬಾಕಿ ಉಳಿಸಿಕೊಂಡಿರುವ ಪ್ರಕರಣದಲ್ಲಿ ಸ್ವಿಸ್‌ ಕಂಪನಿಯ ಅರ್ಜಿಗೆ ಸಂಬಂಧಿಸಿದಂತೆ ಖಾಸಗಿ ವೈಮಾನಿಕ ಸಂಸ್ಥೆ ಸ್ಪೈಸ್‌ಜೆಟ್‌ ಅನ್ನು ಮುಚ್ಚಲು ಹಾಗೂ ಅದರ ಆಸ್ತಿಯನ್ನು ಜಪ್ತಿ ಮಾಡಲು ಮದ್ರಾಸ್‌ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

ಈ ಮಧ್ಯೆ ವೈಮಾನಿಕ ಸಂಸ್ಥೆಯು, ‘ಐದು ಮಿಲಿಯನ್‌ ಡಾಲರ್‌ಗೆ ಸರಿಸಮಾನವಾದ ಮೊತ್ತವನ್ನು (ಸುಮಾರು ₹ 37.72 ಕೋಟಿ) ಎರಡು ವಾರದಲ್ಲಿ ಠೇವಣಿ ಇಡಬೇಕು ಎಂಬ ಷರತ್ತು ವಿಧಿಸಿ ಕೋರ್ಟ್‌, ಮೂರು ವಾರದ ಅವಧಿಗೆ ಈ ಆದೇಶಕ್ಕೆ ತಡೆಯಾಜ್ಞೆ ನೀಡಿದೆ’ ಎಂದು ತಿಳಿಸಿದೆ.ಮೇಲ್ಮನವಿ ಸಲ್ಲಿಸುವುದು ಸೇರಿದಂತೆ ಸೂಕ್ತ ಪರಿಹಾರ ಕ್ರಮಗಳನ್ನು ಸಂಸ್ಥೆಯು ಕೈಗೊಳ್ಳಲಿದೆ ಎಂದು ತಿಳಿಸಿದೆ.

ಕಂಪನಿ ಕಾಯ್ದೆ 1956 ಅನ್ವಯ ಸ್ಪೈಸ್‌ಜೆಟ್ ಸಂಸ್ಥೆಯ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಆಸ್ತಿ ಜಪ್ತಿ ಪ್ರಕ್ರಿಯೆ ಜಾರಿಗೊಳಿಸಲು ಅಧಿಕೃತವಾಗಿ ಬರಖಾಸ್ತುದಾರರನ್ನು ನೇಮಿಸಬೇಕು ಎಂದು ಕೋರಿ ಸ್ವಿಟ್ಜರ್‌ಲೆಂಡ್‌ ಕಾಯ್ದೆಯಡಿ ನೋಂದಣಿಯಾಗಿರುವ ಕ್ರೆಡಿಟ್‌ ಸ್ಯೂಸ್‌ ಎ.ಜಿ ಸಂಸ್ಥೆಯು ಅರ್ಜಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT