ಸೋಮವಾರ, ಆಗಸ್ಟ್ 8, 2022
22 °C

ಠಾಣೆ: ಏಕನಾಥ ಶಿಂಧೆಗೆ ಬೆಂಬಲ ಸೂಚಿಸಿದ ಮೂವರು ನಾಯಕರನ್ನು ಉಚ್ಚಾಟಿಸಿದ ಶಿವಸೇನಾ

ಪಿಟಿಐ Updated:

ಅಕ್ಷರ ಗಾತ್ರ : | |

ಠಾಣೆ: ಶಿವಸೇನಾ ಬಂಡಾಯ ಶಾಸಕ ಏಕನಾಥ ಶಿಂಧೆ ಅವರನ್ನು ಬೆಂಬಲಿಸಿದ ಮಹಾರಾಷ್ಟ್ರದ ಠಾಣೆಯ ಮೂವರು ನಾಯಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಠಾಣೆಯ ಮಾಜಿ ಮೇಯರ್ ಹಾಗೂ ಶಿವಸೇನಾ ಜಿಲ್ಲಾ ಸಂಚಾಲಕಿ ಮೀನಾಕ್ಷಿ ಶಿಂಧೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ನಿರ್ದೇಶನದ ಮೇರೆಗೆ ಮೀನಾಕ್ಷಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಪಕ್ಷದ ಪ್ರಕಟಣೆ ಮಂಗಳವಾರ ತಿಳಿಸಿದೆ.

ಇದಕ್ಕೂ ಮುನ್ನ ಠಾಣೆಯ ಮಾಜಿ ಮೇಯರ್ ನರೇಶ್ ಮಾಸ್ಕೆನ್ ಹಾಗೂ ಸಂಚಾಲಕ ರಾಹುಲ್ ಲೋಂಡೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಇವರೆಲ್ಲ ಶಿಂಧೆ ಅವರಿಗೆ ಬೆಂಬಲ ಸೂಚಿಸಿದ್ದರು.

ಶಿವಸೇನಾದ ದೊಂಬಿವಿಲಿ ಕಚೇರಿಯಿಂದ ಏಕನಾಥ ಶಿಂಧೆ ಹಾಗೂ ಸಂಸದ ಶ್ರೀಕಾಂತ್ ಶಿಂಧೆ ಭಾವಚಿತ್ರವನ್ನು ತೆರವುಗೊಳಿಸಲಾಗಿದೆ.

ಈ ಮಧ್ಯೆ, ಎಲ್ಲರೂ ಗುವಾಹಟಿಯಿಂದ ಮುಂಬೈಗೆ ಮರಳಿ ಬನ್ನಿ. ಜತೆಯಾಗಿ ಕುಳಿತುಕೊಂಡು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸೋಣ ಎಂದು ಬಂಡಾಯ ಶಾಸಕರಿಗೆ ಉದ್ಧವ್ ಠಾಕ್ರೆ ಕರೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು