ಶುಕ್ರವಾರ, ಜನವರಿ 28, 2022
25 °C

ಹುಂಡಿ ಕದಿಯುವ ಮುನ್ನ ದೇವರಿಗೆ ಕೈಮುಗಿದ ಕಳ್ಳ, ಹೀಗೊಂದು ಅಪರೂಪದ ಘಟನೆ

ಪಿಟಿಐ Updated:

ಅಕ್ಷರ ಗಾತ್ರ : | |

ಥಾಣೆ: ದೇವಸ್ಥಾನದಲ್ಲಿ ಹುಂಡಿ ಕದಿಯಲೆಂದು ಬಂದ ಕಳ್ಳನೊಬ್ಬ ಮಾಡಿದ ಕಾರ್ಯ ಇದೀಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಹಾರಾಷ್ಟ್ರದ ಥಾಣೆ ನಗರದಲ್ಲಿರುವ ದೇವಸ್ಥಾನದಲ್ಲಿ ದೇವರ ಹುಂಡಿ ಕದಿಯುವ ಮುನ್ನ ಕಳ್ಳ ದೇವರಿಗೆ ಕೈಮುಗಿದಿದ್ದಾನೆ. ಕಳ್ಳತನವಾಗಿರುವ ವಿಚಾರ ತಿಳಿದ ಬಳಿಕ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಆರೋಪಿ ನವೆಂಬರ್ 9 ರ ರಾತ್ರಿ ಇಲ್ಲಿನ ಖೋಪಾಟ್ ಪ್ರದೇಶದ ಹನುಮಾನ್ ದೇವಾಲಯಕ್ಕೆ ನುಗ್ಗಿ ಸುಮಾರು 1,000 ರೂಪಾಯಿಗಳಿದ್ದ ಹುಂಡಿಯನ್ನು ಕದ್ದಿದ್ದಾರೆ ಎಂದು ದೇವಸ್ಥಾನದ ಉಸ್ತುವಾರಿ ನೀಡಿದ ದೂರನ್ನು ಉಲ್ಲೇಖಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ ದೇವಸ್ಥಾನದ ಹುಂಡಿಯನ್ನು ಕದಿಯುವ ಮುನ್ನ ಕಳ್ಳನು ದೇವರ ವಿಗ್ರಹದ ಮುಂದೆ ನಿಂತು ಪ್ರಾರ್ಥನೆ ಮಾಡುವುದು ಕಂಡುಬಂದಿದೆ. ಈ ಸಂಬಂಧ ನೌಪಾದ ಪೊಲೀಸರು ಶನಿವಾರ ಆರೋಪಿಯನ್ನು ಬಂಧಿಸಿದ್ದು, ಆತನಿಂದ ಕದ್ದ ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು